Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಮಜಾಟಾಕೀಸ್ ನಲ್ಲಿ ಒನ್ ಅಂಡ್ ಒನ್ಲಿ ವರಲಕ್ಷ್ಮೀಯ ಖ್ಯಾತಿ : ರಾಣಿ ಪಾತ್ರದ ಶ್ವೇತಾ ಹೇಳಿದ್ದೇನು..?

---Advertisement---

 

ಬೆಂಗಳೂರು: ಸುಮಧುರವಾದ ಧ್ವನಿ ಹೊಂದಿದ್ದ ಅಪರ್ಣಾ ಇನ್ನಿಲ್ಲ. ಅವರಿಲ್ಲದ ನೋವು ಕನ್ನಡಿಗರನ್ನೇ ಬಾಧಿಸಿದೆ. ಅಪರ್ಣಾ ಹೆಚ್ಚು ಖ್ಯಾತಿ ಪಡೆದಿದ್ದು ಒಂದು ತಮ್ಮ ಸ್ವಚ್ಚವಾದ ಕನ್ನಡದಿಂದ,  ಮತ್ತೊಂದು ಒನ್ ಅಂಡ್ ಒನ್ಲಿ ವರಲಕ್ಷ್ಮೀ ಪಾತ್ರವನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಇದೇ ರಿಯಾಲಿಟಿ ಶೋನಲ್ಲಿ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಕೂಡ ಕಾಣಿಸಿಕೊಂಡಿದ್ದರು. ಅಪರ್ಣಾ ಅವರ ತಂಗಿ ಪಾತ್ರದಲ್ಲಿ. ಈಗ ಅವರಿನ್ನು ಇಲ್ಲ ಎಂದು ಕೇಳಿ ಭಾವುಕರಾಗಿದ್ದಾರೆ. ಅಂದಿನ ದಿನಗಳನ್ನು ನೆನೆದಿದ್ದಾರೆ.

ಆ ದಿನಗಳು ತುಂಬಾ ನಗು ಇರ್ತಾ ಇತ್ತು. ಅದರ ರಿಹರ್ಸಲ್‌ಗೆಲ್ಲಾ ಹೋದಾಗ ಖುಷಿಯಾಗಿರ್ತಾ ಇತ್ತು. ಅಪರ್ಣಾ ಕೂಡ ಖೂಷಿಯಾಗಿಯೇ ಇರುತ್ತಾ ಇದ್ದರು. ವೈಯಕ್ತಿಕ ವಿಚಾರಗಳನ್ನು ಕೂಡ ಹಂಚಿಕೊಳ್ಳುವಷ್ಟು ಬಾಂಧವ್ಯ ನಮ್ಮ ಜೊತೆ ಇತ್ತು. ಅಕ್ಕ ತಂಗಿಯರಂತೆ ಇದ್ದೆವು. ಅವರಿಗೆ ಪ್ರೊಫೆಷನಲ್ ಅಂತ ಬಂದರೆ ಹೆವಿ ಎನರ್ಜಿ. ಹೆಚ್ಚೆಚ್ಚು ಪಾತ್ರಗಳನ್ನು ಮಾಡಬೇಕು ಎಂಬುದು ಅವರಿಗಿತ್ತು. ನೋವಿಟ್ಟುಕೊಂಡು ಕೆಲಸ ಮಾಡಿದ್ದಾರೆ. ಈ ರೀತಿ ಅಪರ್ಣಾ ಅವರನ್ನು ನೋಡುತ್ತೀವಿ ಅಂದುಕೊಂಡಿರಲಿಲ್ಲ. ನಾವೂ ನೋಡಿದ ಅಪರ್ಣಾ ಬೇರೆ. ಮಗುವಿನಂತೆ ಇರ್ತಾ ಇದ್ರು, ತಿಂತಾ ಇದ್ರು. ಕನ್ನಡದ ಬಗ್ಗೆ ಮಾತಾಡ್ತಾ ಇದ್ರು. ಅಪರ್ಣಾರನ್ನ ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ. ವರಲಕ್ಷ್ಮೀ ಮತ್ತು ರಾಣಿ ಪಾತ್ರವನ್ನು ಮಾಡಿದಾಗ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳು ಬರ್ತಾ ಇತ್ತು. ಅದನ್ನು ನಾವೂ ಚರ್ಚೆ ಮಾಡ್ತಾ ಇದ್ವಿ. ಆದರೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಒನ್ ಅಂಡ್ ಒನ್ಲಿ ವರಲಕ್ಷ್ಮೀ ಆದರೆ ಈ ಸ್ಥಿತಿಯಲ್ಲಿ, ಮಲಗಿದ್ದಲ್ಲೇ ಮಲಗಿರುವುದನ್ನು ನೋಡುವುದಕ್ಕೆ ನಮ್ಮಿಂದ ನೋಡುವುದಕ್ಕೆ ಆಗುತ್ತಿಲ್ಲ’ ಎಂದಿದ್ದಾರೆ.

ಇಂದು ಅಪರ್ಣಾ ಅವರ ಬನಶಂಕರಿ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಗಣ್ಯರೆಲ್ಲಾ ಭಾಗಿಯಾಗಿದ್ದು, ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment