ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಸೆ. 22 : ಪ್ರಪಂಚದ್ಯಾದಂತ್ಯ ಕುರಿಕಾಯುವವರ ಸಂಘಟನೆ ಮಾಡುವುದರ ಮೂಲಕ ಒಕ್ಕೂಟವನ್ನು ರಚನೆ ಮಾಡಲಾಗುತ್ತಿದೆ. ಇದರ ಅಂಗವಾಗಿ ಅ. 2 ಮತ್ತು 3 ಬೆಳಗಾವಿಯಲ್ಲಿ ಅಖಿಲ ಭಾರತ ಮಟ್ಟದ ಕುರುಬರ ಸಮಾವೇಶವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಸನ್ಮಾನಿಸಲಾಗುವುದೆಂದು ಷಪಡ್ಸ್ ಇಂಡಿಯಾ ಇಂಟರ್ ನ್ಯಾಷನಲ್‍ನ ಕಾರ್ಯದರ್ಶಿ ಜಿ.ಎಸ್.ಕುಮಾರ್ ಗೌಡ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇರುವ ಕುರಬರನ್ನು ಸಂಘಟಿಸುವ ಕಾರ್ಯ 2009ರಲ್ಲಿ ಹೆಚ್.ವಿಶ್ವನಾಥ್ ರವರ ನೇತೃತ್ವದಲ್ಲಿ ಸಂಘಟನೆ ಕಾರ್ಯ ನಡೆದಿದ್ದು ಮುಂದಿನ ಹಂತವಾಗಿ ಪ್ರಪಂಚದ್ಯಾಂತ್ಯ ಇರುವ ಕುರುಬರನ್ನು ಸಂಘಟಿಸುವ ಕಾರ್ಯವೂ ಸಹಾ ನಡೆಯುತ್ತಿದೆ. ಈಗಾಗಲೇ ವಿವಿಧ ದೇಶಗಳಲ್ಲಿ ಪ್ರವಾಸ ಮಾಡುವುದರ ಮೂಲಕ ಕುರುಬರನ್ನು ಸಂಘಟಿಸಲಾಗುತ್ತಿದೆ. ಸಂಸ್ಥಾಪನಾ ಅಧ್ಯಕ್ಷರಾಗಿ ವಿಶ್ವನಾಥ್ ರವರನ್ನು ನೇಮಕ ಮಾಡಲಾಗಿದೆ.
2019ರಿಂದಲೇ ಪ್ರಪಂಚದ ವಿವಿಧ ದೇಶಗಳಲ್ಲಿ ಪ್ರವಾಸ ಮಾಡುವುದರ ಮೂಲಕ ಷಪಡ್ಸ್‍ರನ್ನು ಸಂಘಟಿಸಲಾಗುತ್ತಿದೆ. 2025ರಲ್ಲಿ ಕೆನಾಡದಲ್ಲಿ ಪ್ರಪಂಚದ ಷಪಡ್ಸ್ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ವಿವಿಧ ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು, ವರ್ತಕರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಅ. 2 ಮತ್ತು 3 ರಂದು ಬೆಳಗಾವಿಯಲ್ಲಿ ಅಖಿಲ ಭಾರತ ಕುರುಬ ಸಮಾವೇಶವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಅ. 3 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಸನ್ಮಾನಿಸಲಾಗುವುದು ಇದರಲ್ಲಿ ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇದರ ಅಧ್ಯಕ್ಷತೆಯನ್ನು ವಿಶ್ವನಾಥ್ ರವರು ವಹಿಸಲಿದ್ದಾರೆ.
ಇದಕ್ಕೂ ಮುನ್ನಾ ದಾವಣಗೆರೆಯಲ್ಲಿ ಜನಾಂಗದ ಸಭೆಯನ್ನು ಸೆ. 25 ರಂದು ಹಮ್ಮಿಕೊಳ್ಳಲಾಗಿದ್ದು ಮಾಜಿ ಸಚಿವರಾದ ರೇವಣ್ಣರವರು ಭಾಗವಹಿಸಲಿದ್ದಾರೆ ಎಂದ ಅವರು ಕುರುಬ ಜನಾಂಗವನ್ನು ಎಸ್.ಟಿ.ಗೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು ಇದರ ಕಡತ ಈಗ ಕೇಂದ್ರ ಸರ್ಕಾರದ ಮುಂದೆ ಇದೆ.
ಇದಕ್ಕೆ ಸಂಬಂದಪಟ್ಟಂತೆ ಪ್ರಧಾನ ಮಂತ್ರಿಗಳು ಇತ್ತೀಚೇಗೆ ಷಪಡ್ಸ್ ರವರ ಸಭೆಯನ್ನು ಕರೆಯುವುದರ ಮೂಲಕ ಅವರ ಜೊತೆ ಮಾತುಕಥೆಯನ್ನು ನಡೆಸಿದ್ದಾರೆ. ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೇ ನಮ್ಮ ಜನಾಂಗವನ್ನು ಎಸ್.ಟಿ.ಗೆ ಸೇರಿಸುತ್ತಾರೆ ಎಂದು ಎಂದು ಕುಮಾರಗೌಡ ತಿಳಿಸಿದರು.
ಗೋಷ್ಟಿಯಲ್ಲಿ ತಿಪ್ಪೇಸ್ವಾಮಿ, ಗಂಗಾಧರ್ ಗುರು, ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಭಾಗವಹಿಸಿದ್ದರು.