Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನವೆಂಬರ್ 21 ಹಾಗೂ 29 ರಂದು ಜಿಲ್ಲಾಧಿಕಾರಿಗಳಿಂದ ತಾಲ್ಲೂಕು ಮಟ್ಟದ ಜನತಾದರ್ಶನ

Facebook
Twitter
Telegram
WhatsApp

ಚಿತ್ರದುರ್ಗ ನ. 18 : ಇದೇ ನ. 21 ರಂದು ಹೊಸದುರ್ಗ ತಾಲ್ಲೂಕು ಅತ್ತಿಮಗ್ಗೆ ಗ್ರಾಮ ಹಾಗೂ ನ. 29 ರಂದು ಚಿತ್ರದುರ್ಗ ತಾಲ್ಲೂಕು ಕುರುಮರಡಿಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಾಲ್ಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸ್ಥಳೀಯವಾಗಿ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವಂತಾಗಲು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ನಿವಾರಿಸುವ ಸಲುವಾಗಿ ಪ್ರತಿ ತಿಂಗಳು ಹದಿನೈದು ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳು ತಾಲ್ಲೂಕು ಮಟ್ಟದ ಜನತಾದರ್ಶನ ಏರ್ಪಡಿಸುವಂತೆ ಸರ್ಕಾರ ನಿರ್ದೇಶನ ನೀಡಿದ್ದು,

ಇದರನ್ವಯ ನ. 21 ರಂದು ಬೆಳಿಗ್ಗೆ 10 ಗಂಟೆಗೆ ಹೊಸದುರ್ಗ ತಾಲ್ಲೂಕು ಅತ್ತಿಮಗ್ಗೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಾಗೂ ನ. 29 ರಂದು ಬೆ. 10 ಗಂಟೆಗೆ ಚಿತ್ರದುರ್ಗ ತಾಲ್ಲೂಕು ಇಂಗಳದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಮರಡಿಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲ್ಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಾಲ್ಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.  ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದು, ಸ್ವೀಕೃತಿ ನೀಡುವ ಸಲುವಾಗಿ ಸಮರ್ಪಕ ರೀತಿಯಲ್ಲಿ ಕೌಂಟರ್ ಗಳ ವ್ಯವಸ್ಥೆ ಮಾಡಲಾಗುವುದು.

ಸಾರ್ವಜನಿಕರು ತಮ್ಮ ಕುಂದುಕೊರತೆ ಕುರಿತ ಅಹವಾಲು, ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ನಂಬಿಕೆ ದ್ರೋಹವಾಗಿದೆ,

ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ನಂಬಿಕೆ ದ್ರೋಹವಾಗಿದೆ, ಈ ರಾಶಿಯವರಿಗೆ ಇಷ್ಟವಿಲ್ಲದ ಮದುವೆ, ಸೋಮವಾರ- ರಾಶಿ ಭವಿಷ್ಯ ಡಿಸೆಂಬರ್-11,2023 ಸೂರ್ಯೋದಯ: 06.31 AM, ಸೂರ್ಯಾಸ್ತ : 05.54 PM ಶಾಲಿವಾಹನ ಶಕೆ1944, ಶುಭಕೃತ ನಾಮ

ವಿದ್ಯಾರ್ಥಿಯ ಪರಿಪೂರ್ಣತೆ ಹಾಗೂ ವಿಕಸನಕ್ಕೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಪೂರಕ : ಆರ್. ಪುಟ್ಟಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 10 :  ವಿದ್ಯಾರ್ಥಿಯ ಪರಿಪೂರ್ಣತೆ ಹಾಗೂ ವಿಕಸನಕ್ಕೆ ಪಠ್ಯ ಸಹಿತ ಪಠ್ಯೇತರ ಚಟುವಟಿಕೆಗಳು ಪೂರಕವಾಗುತ್ತವೆ.

ಈ ವಾರ ಬಿಗ್ ಬಾಸ್ ಮನೆಯಿಂದ ಬರ್ತಾ ಯಾರು ಗೊತ್ತಾ..? ಸುದೀಪ್ ಕೊಟ್ಟ ಅವಕಾಶವನ್ನು ಬಳಸಿಕೊಳ್ಳಲಾಗಲಿಲ್ವಾ..?

ಬಿಗ್ ಬಾಸ್ ಸೀಸನ್ 10.. ಈ ವಾರವಂತು ಸಾಕಷ್ಟು ಕಠಿಣವಾಗಿತ್ತು. ಬಿಗ್ ಬಾಸ್ ಏನೋ ನಿರೀಕ್ಷೆ ಮಾಡಿ ಕೊಟ್ಟ ಟಾಸ್ಕ್ ಸಂಪೂರ್ಣವಾಗಿ ಬೇರೆ ರೀತಿಯಾಗಿಯೇ ಟರ್ನ್ ಆಗಿತ್ತು. ರಾಕ್ಷಸರು ಹಾಗೂ ಗಂಧರ್ವರು ಅಂತ ಮಾಡಿದ್ದು

error: Content is protected !!