ಚಿತ್ರದುರ್ಗ, (ಏ.30) : ಮೇ.1 ರಂದು ಬೆಳಗ್ಗೆ 10ಗಂಟೆಗೆ ತಾಲೂಕಿನ ಯಳಗೋಡು ಗ್ರಾಮದಲ್ಲಿ ಏರ್ಪಡಿಸಿರುವ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮಜಯಂತೋತ್ಸವದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕನ್ನಡಭಾರತಿ ವಿಭಾಗದಲ್ಲಿ ಸಹಪ್ರಾಧ್ಯಾಪಕರು ಮತ್ತು ಪ್ರಸಾರಾಂಗದ ಉಪನಿರ್ದೇಶಕರಾಗಿರುವ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಬರೆದಿರುವ “ಅಂಬೇಡ್ಕರ್ ಮತ್ತು ಅಧ್ಯಾತ್ಮ’’ ಕೃತಿಯನ್ನು ಗ್ರಾಮಪಂಚಾಯಿತಿ ಸದಸ್ಯರಾಗಿರುವ ಕೆ. ಆರ್.ಬಸವರಾಜ್ ಅವರು ಲೋಕಾರ್ಪಣೆ ಮಾಡುವರು. ಕೃತಿ ಕುರಿತು ಅಧ್ಯಾಪಕ ನಾಗರಾಜ್ ಕಣಿವೆಬಿಳಚಿ ಮಾತಾಡುವರು.
ನಿವೃತ ಮುಖ್ಯಶಿಕ್ಷಕ ಸಿ.ಶರಣಪ್ಪ ಅಧ್ಯಕ್ಷತೆ ವಹಿಸುವರು. ಆರ್.ಟಿ. ಮಹಾಂತೇಶ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಯಲ್ಲಪ್ಪ ಜಿ., ವಿಶೇಷ ಉಪನ್ಯಾಸ ನೀಡುವರು.
ಸಾಹಿತಿ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಡಾ.ರಮೇಶ್ ಆರ್.ಚೀಳಂಗಿ, ವಲಯ ಅರಣ್ಯಾಧಿಕಾರಿ ಆರ್.ಟಿ.ಮಂಜುನಾಥ್, ಪಿ.ಡಿ.ಓ. ಮಲ್ಲಿಕಾರ್ಜುನ್, ಗ್ರಾಮಪಂಚಾಯಿತಿ ಸದಸ್ಯರಾದ ಪಾರ್ವತಮ್ಮ, ಬಸಮ್ಮ, ಅನಿತ ಮೊದಲಾದವರು ಭಾಗವಹಿಸುವರು. ನಿವೃತ್ತ ನೌಕರರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಏರ್ಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಲಾಗಿದೆ.