ಮಾರ್ಚ್ 10 ರಂದು ಮಲ್ಲಾಡಿಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.17 :  ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿಯಲ್ಲಿ ಮಾ.10 ರಂದು ಭಾನುವಾರ ಏರ್ಪಡಿಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯ ಕಸಾಪ ವಾರ್ಷಿಕ ಸಾಮಾನ್ಯ ಸಭೆ ಏರ್ಪಡಿಸಲಾಗಿದೆ. ರಾಜ್ಯ ಮತ್ತು ನೆರೆ ರಾಜ್ಯದ ಎಲ್ಲ ಆಜೀವ ಸದಸ್ಯರು ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಸಾಮಾನ್ಯ ಸಭೆಯ ತಿಳುವಳಿಕೆ ಪ್ರಕಟಣೆಯನ್ನು ಕಸಾಪ ತನ್ನ ವೆಬ್‍ಸೈಟ್ ನಲ್ಲಿ ಈಗಾಗಲೇ ಪ್ರಕಟಿಸಿದೆ.

ಆಯಾ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿನ ಕಚೇರಿ ಸೂಚನಾ ಫಲಕಗಳಲ್ಲಿ ಸಭಾ ಸೂಚನಾ ತಿಳುವಳಿಕೆಯ ಪತ್ರವನ್ನು ಪ್ರಕಟಿಸಲು ಸೂಚಿಸಲಾಗಿದೆ. ವಾರ್ಷಿಕ ಸಭೆಯಲ್ಲಿ ಹಿಂದಿನ ವರ್ಷದ ವಾರ್ಷಿಕ ಸಭೆಯ ದೃಢೀಕರಣ ಹಾಗೂ ಲೆಕ್ಕ ಪತ್ರಗಳ ಮಂಡನೆ ಸೇರಿದಂತೆ ಒಂಬತ್ತು ಅಂಶಗಳು ಕಾರ್ಯಸೂಚಿಯಲ್ಲಿವೆ.

ವಾರ್ಷಿಕ ಸಭೆಗೆ ಹಾಜರಾಗುವ ಸದಸ್ಯರು ಕಡ್ಡಾಯವಾಗಿ ಗುರುತಿನ ಪತ್ರ ತರಬೇಕು. ಪ್ರಶ್ನೆಗಳನ್ನು ಕೇಳಬಯಸುವ ಸದಸ್ಯರು ತಮ್ಮ ಪ್ರಶ್ನೆಯನ್ನು ಕನಿಷ್ಟ ಎರಡು ವಾರಗಳ ಮುಂಚೆ ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಇವರಿಗೆ ಕಳುಹಿಸತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9449510078, 9980383294, 9538418943, 9880031083

Share This Article
Leave a Comment

Leave a Reply

Your email address will not be published. Required fields are marked *