ಚಿತ್ರದುರ್ಗ,( ಜುಲೈ 13) : ಇದೇ ಜುಲೈ 16ರಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚಿತ್ರದುರ್ಗ ತಾಲ್ಲೂಕಿನ ರಾಯನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ.
ಉಳಿದಂತೆ ಚಳ್ಳಕೆರೆಯ ರಾಮಜೋಗಿಹಳ್ಳಿ, ಹಿರಿಯೂರಿನ ನಂದಿಹಳ್ಳಿ, ಹೊಸದುರ್ಗದ ಡಿ.ಮಲ್ಲಾಪುರ, ಹೊಳಲ್ಕೆರೆಯ ತಣಿಗೆಹಳ್ಳಿ, ಮೊಳಕಾಲ್ಮೂರಿನ ಮಾರಮ್ಮನಹಳ್ಳಿ ಗ್ರಾಮದಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.