ಜನವರಿ 16ರಂದು ಅರಳಿದ ಹೂವುಗಳು ಚಲನಚಿತ್ರ ಹಾಡುಗಳ ವಿಡಿಯೋ ಬಿಡುಗಡೆ ಸಮಾರಂಭ

1 Min Read

 

ಚಿತ್ರದುರ್ಗ, (ಜ.13): ಸೋನು ಫಿಲಂಸ್ ಸಂಸ್ಥೆಯಡಿ ನಿರ್ಮಿಸಿರುವ ನಿವೃತ್ತ ಶಿಕ್ಷಕ ಕೆ.ಮಂಜುನಾಥ್ ನಾಯಕ್ ಅವರ ಕಾದಂಬರಿ ಆಧಾರಿತ ಅರಳಿದ ಹೂವುಗಳು ಚಲನಚಿತ್ರದ ಹಾಡುಗಳ ವಿಡಿಯೋ ಬಿಡುಗಡೆ ಸಮಾರಂಭವನ್ನು ಇದೇ ಜನವರಿ 16ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಬಂಜಾರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ಎಸ್‍ಆರ್‍ಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ.ಎ.ಲಿಂಗಾರೆಡ್ಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜಿ.ರಾಜನಾಯ್ಕ, ಆರ್.ನಾಗೇಂದ್ರ ನಾಯ್ಕ, ನಗರಸಭೆ ಸದಸ್ಯರಾದ ಶ್ರೀನಿವಾಸ್, ಭಾಸ್ಕರ್, ಮಲ್ಲಿಕಾರ್ಜುನ್, ಗೊಡಬನಹಾಳ್ ಕೆ.ಟಿ.ಪರಮೇಶ್ವರಪ್ಪ ಕಾನ್ವೆಂಟ್ ಕಾರ್ಯದರ್ಶಿ ಹೆಚ್.ಎಂ.ವೀರಭದ್ರಪ್ಪ, ವಿಶ್ವಕರ್ಮ ಸಮಾಜದ ಮುಖಂಡ ರಾಜಣ್ಣಾಚಾರ್, ಚಿತ್ರದುರ್ಗ ಸಿಟಿ ಇನ್ಸಿಟಿಟ್ಯೂಟ್ ಕಾರ್ಯದರ್ಶಿ ಚಿತ್ರಲಿಂಗಪ್ಪ, ಖಜಾಂಚಿ ಅಜಿತ್ ಪ್ರಸಾದ್ ಜೈನ್, ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಆನಂದ್, ನಗರಸಭೆ ಮಾಜಿ ಅಧ್ಯಕ್ಷ  ಹೆಚ್.ಮಂಜಪ್ಪ, ಚಿತ್ರದುರ್ಗ ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಚಿತ್ರದ ನಿರ್ಮಾಪಕ ಮಂಜುನಾಥ್ ನಾಯಕ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *