ಡಿಸೆಂಬರ್‌ 29 ರಂದು ಪಿಳ್ಳೇಕೆರನಹಳ್ಳಿಯ ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವ

1 Min Read

 

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 27  : ನಗರದ ಹೊರವಲಯದ ಪಿಳ್ಳೇಕೆರನಹಳ್ಳಿಯಲ್ಲಿರುವ ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನದಲ್ಲಿ 12 ನೇ ವರ್ಷದ ಕಾರ್ತಿಕ ಮಹೋತ್ಸವ ಡಿಸೆಂಬರ್ 29 ರಂದು ಸಂಜೆ 6-45 ಕ್ಕೆ ಆರಂಭಗೊಳ್ಳಲಿದೆ.

ಕಾರ್ಯಕ್ರಮದ ವಿವರ :
1) ಬೆಳಗ್ಗೆ 7.30 ಗಂಟೆಗೆ ಗಂಗಾ ಪೂಜೆ.
2) ಗ್ರಾಮದ ಶಾಂತಿ ಸಮೃದ್ಧಿಯ ಸಂಕೇತವಾಗಿ ಶಕ್ತಿ ದೇವತೆಯ ಕುಂಭ ಹೊತ್ತ ಮಹಿಳೆಯರಿಂದ ಗ್ರಾಮದ ಎಲ್ಲಾ ದೇವಾಲಯಗಳಿಗೆ ತೆರಳಿ ಕುಂಕುಮ ಮತ್ತು ಅಕ್ಷತೆಯನ್ನು ಸಮರ್ಪಿಸುವುದು.
3) ಬೆಳಗ್ಗೆ 9.45ಕ್ಕೆ ಶಕ್ತಿ ದೇವತೆಗೆ ವಿಶೇಷ ಅಭಷೇಕ ಸೇವೆ
4) ಚಿತ್ರದುರ್ಗ ನಗರದ ದೇವತೆಗಳ ಅಲಂಕೃತರಿಂದ ಗ್ರಾಮದ ಶಕ್ತಿ ದೇವಿಗೆ ವಿಶೇಷ ಅಲಂಕಾರದ ಸೇವೆ.
5) 12ನೇ ವರ್ಷದ ವಿಶೇಷ ಅದ್ದೂರಿ ಕಾರ್ತಿಕೋತ್ಸವ ಅಲಂಕಾರದ ಮಹಾ ಮಂಗಳಾರತಿ
6) ಗ್ರಾಮದ ಶಕ್ತಿ ದೇವತೆಗೆ 12ನೇ ವರ್ಷದ ಅದ್ಧೂರಿ ಕಾರ್ತಿಕೋತ್ಸವದ ದೀಪೋತ್ಸವದ ಚಾಲನೆ ಸಂಜೆ 6.45ಕ್ಕೆ
7) ಸಮಸ್ತ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಸಂಜೆ 7.30ಕ್ಕೆ
8) ಶಕ್ತಿ ದೇವತೆಯ ಈ ಎಲ್ಲಾ ಕಾರ್ಯಕ್ರಮಗಳನ್ನು ಪೂಜಾರಿ ಮಹಾಂತೇಶ್ ಮತ್ತು ಪುರೋಹಿತರಾದ ರಾಜಶೇಖರಯ್ಯ ನೆರವೇರಿಸಲಿದ್ದಾರೆ.
9) ಶ್ರೀ ಶಕ್ತಿ ದೇವಿಯ ಕುಂಬ ಹೊರುವ ಎಲ್ಲಾ ಹೆಣ್ಣು ಮಕ್ಕಳು ಸರಿಯಾಗಿ ಗಂಗಾ ಪೂಜಾ ಸಮಯಕ್ಕೆ (ಕುಂಭ, ಹಸಿರು ಬಣ್ಣದ ಜಾಕಿಟ್, ತೆಂಗಿನಕಾಯಿ ತರುವುದು)
10) ರಾತ್ರಿ 9.00ಗಂಟೆ ನಂತರ ಭಜನೆ ಕಾರ್ಯಕ್ರಮ ನಡೆಯಲಿದೆ.

ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನ ಸಹಾಯ ನೀಡಿ ಮಾರಮ್ಮದೇವಿ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿಯವರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ : 9886800003, 8618416841 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *