ಅತ್ಯಾಚಾರವಾದ ಅಪ್ರಾಪ್ತೆ ಸಹಾಯಕ್ಕೆ ಬರಲೇ ಇಲ್ಲ ಜನ : ಇದು ಇಡೀ ದೇಶವೇ ತಲೆ ತಗ್ಗಿಸುವಂತ ಘಟನೆ..!

suddionenews
1 Min Read

 

ಉಜ್ಜಯಿನಿ: ಅತ್ಯಾಚಾರದಂತ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವುದಕ್ಕಂತೂ ಸಾಧ್ಯವೇ ಆಗುತ್ತಿಲ್ಲ. ಇದೀಗ ಮಧ್ಯಪ್ರದೇಶದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಆದರೆ ಅಲ್ಲಿನ ಜನಗಳು ನಡೆದುಕೊಂಡಿರುವ ರೀತಿ ಇಡೀ ಮನುಕುಲ ಸಮಾಜವೇ ತಲೆ ತಗ್ಗಿಸುವಂತೆ ಇದೆ.

ಕಿಡಿಗೇಡಿಗಳು ಹಾಡ ಹಗಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆ ಮಗು ತನಗೆ ಸಹಾಯ ಮಾಡಿ ಎಂದು ಇಡೀ ಉಜ್ಜಯಿನಿಯ ಸಂವರಖೇಡಿ ಅನ್ನೋ ಕಾಲೋನಿಯಲ್ಲೆಲ್ಲಾ ಸಂಚರಿಸಿದೆ. ಸಿಕ್ಕಸಿಕ್ಕವರನ್ನೆಲ್ಲಾ ಪರಿಪರಿಯಾಗಿ ಬೇಡಿದೆ. ಆದರೆ ಆ ಬಾಲಕಿ ಪರಿಪರಿಯಾಗಿ ಬೇಡಿಕೊಂಡರು ಯಾರೂ ಕೂಡ ಸಹಾಯಕ್ಕೆ ಬಂದಿಲ್ಲ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆ ವಿಡಿಯೋದಲ್ಲಿ ಆ‌ ಪುಟ್ಟ ಬಾಲಕಿ ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಎಲ್ಲರನ್ನು ಬೇಡಿಕೊಳ್ಳುತ್ತಿದ್ದಾಳೆ. ಯಾರೂ ಸಹಾಯ ಮಾಡದೆ ಇದ್ದಾಗ ಆ ಬಾಲಕಿ ಕಷ್ಟಪಟ್ಟು ಆಶ್ರಮದ ಬಳಿಗೆ ಸೇರಿದ್ದಾಳೆ. ಆಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಅರ್ಚಕರೊಬ್ಬರು ಆಸ್ಪತ್ರೆಗೆ ಸೇರಿಸಿದ್ದಾರೆ ಎಂಬ ಮಾಹಿತಿ ಇದೆ. ಮಗುಗೆ ರಕ್ತಸ್ರಾವವಾಗುತ್ತಿದ್ದರು ಯಾರು ಕೂಡ ತಲೆ ಕೆಡಿಸಿಕೊಳ್ಳಲಿಲ್ಲವಂತೆ. ಈ ವಿಡಿಯೋದಲ್ಲಿ ಮಾನವೀಯತೆಯೇ ಇಲ್ಲದ ದೃಶ್ಯ ಸೆರೆಯಾಗಿದೆ. ಇದು ಇಡೀ ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ.

ಈ ಸಂಬಂದ ಮಹಾಕಲ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತೀವ್ರ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈಗಾಗಾಲೇ ಹಿರಿಯ ಪೊಲೀಸ ಅಧಿಕಾರಿಗಳ ತಂಡ ಕೂಡ ರಚನೆ ಮಾಡಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *