Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಗಸ್ಟ್ 26 ರಂದು ಬಸವಣ್ಣನವರ  ನೀನಲ್ಲದೆ ಮತ್ತಾರೂ ಇಲ್ಲವಯ್ಯ ನೃತ್ಯರೂಪಕ : ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

Facebook
Twitter
Telegram
WhatsApp

 

ಸುದ್ದಿಒನ್,ಚಿತ್ರದುರ್ಗ, ಆ.21 : ಹನ್ನೆರಡನೆ ಶತಮಾನದ ಕ್ರಾಂತಿಕಾರಿ ಬಸವಣ್ಣನವರ 44 ವಚನಗಳುಳ್ಳ ನೃತ್ಯರೂಪಕ ನೀನಲ್ಲದೆ ಮತ್ತಾರೂ ಇಲ್ಲವಯ್ಯ(ತುಮ್ಹಾರೆ ಸಿವಾ ಔರ್ ಕೊಯಿ ನಹಿ) ಆ.26 ರಂದು ಸಂಜೆ 6-30 ಕ್ಕೆ ತ.ರಾ.ಸು.ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸಾಣೆಹಳ್ಳಿಯ  ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಇಲ್ಲಿನ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿಗಳು ಸಾಣೆಹಳ್ಳಿಯ ಶಿವಕುಮಾರ ಕಲಾ ಸಂಘ ತಂಡದಿಂದ ಅರ್ಪಿಸುವ ದೇಶದ ಪ್ರಥಮ ವಚನ ಸಂಸ್ಕøತಿ ಅಭಿಯಾನ 2019 ರಲ್ಲಿ ನೂರು ಮಕ್ಕಳಿಂದ ಆರಂಭಗೊಂಡ ನೃತ್ಯ ರೂಪಕ ಬಾಂಬೆಯಲ್ಲಿ ಪ್ರದರ್ಶಿಸಲಾಯಿತು.

ಶ್ರೀನಿವಾಸ್ ಜಿ.ಕಪ್ಪಣ್ಣನವರ ಪುತ್ರಿ ಸ್ನೇಹ ಕಪ್ಪಣ್ಣ ತಂಡದಿಂದ ಹದಿನಾಲ್ಕು ರಾಜ್ಯಗಳಲ್ಲಿ ನಲವತ್ತು ಪ್ರಯೋಗಗಳಾಗಿದ್ದು, ಕಳೆದ ತಿಂಗಳು 2 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಉದ್ಗಾಟನೆಗೊಳಿಸಿದರು. 30 ಹೆಣ್ಣುಮಕ್ಕಳ ತಂಡ ಹೈದರಾಬಾದ್‍ನಿಂದ ಬೇರೆ ಬೇರೆ ರಾಜ್ಯಗಳಲ್ಲಿ ಹತ್ತು ಸಾವಿರ ಕಿ.ಮೀ. ಸುತ್ತಾಡಿ ನೃತ್ಯರೂಪಕ ಪ್ರದರ್ಶಿಸಿರುವುದಕ್ಕೆ ದೇಶದ ಪ್ರಧಾನಿ ನರೇಂದ್ರಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಬಸವಕಲ್ಯಾಣ, ಬೀದರ್, ಬಾಗಲಕೋಟೆ, ಇಳಕಲ್, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಹುಳಿಯಾರು, ಚಿಕ್ಕಮಗಳೂರು, ಕಡೂರಿನಿಂದ ಸೆ.ರಂದು ಸಾಣಿಹಳ್ಳಿಗೆ ಬರುತ್ತದೆ. ಅಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಕೇಂದ್ರ ಮಂತ್ರಿ ಇನ್ನು ಅನೇಕರು ಭಾಗವಹಿಸಲಿದ್ದಾರೆ.

ಒಂದು ಗಂಟೆ ಹತ್ತು ನಿಮಿಷದ ಈ ನೃತ್ಯ ರೂಪಕವನ್ನು ಎಲ್ಲೆಡೆ ಕುತೂಹಲದಿಂದ ಪ್ರೇಕ್ಷಕರು ವೀಕ್ಷಿಸಿದ್ದಾರೆ. ಅಂದಾಜು ಅರವತ್ತು ಲಕ್ಷ ರೂ.ವೆಚ್ಚವಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೂ ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯರಾದ ಐ.ಜಿ.ಚಂದ್ರಶೇಖರಯ್ಯ ಮಾತನಾಡಿ ಬಸವಣ್ಣನವರ 44 ವಚನಗಳುಳ್ಳ ನೃತ್ಯರೂಪಕದಲ್ಲಿ ಬೆಂಗಳೂರಿನ ಐ.ಟಿ.ಕಂಪನಿಯ ಕೆಲಸಗಾರರು, ನೃತ್ಯ ಶಾಲಾ ಶಿಕ್ಷಕಿಯರು ಇದ್ದಾರೆ. 2019 ರಲ್ಲಿ ಮುಂಬಯಿಯಲ್ಲಿ ನೂರು ವಿದ್ಯಾರ್ಥಿಗಳು ಕನ್ನಡ ವಚನಗಳ ನೃತ್ಯವನ್ನು ಹಿಂದಿಯಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.ಬಾಂಬೆ ಒಂದರಲ್ಲಿಯೇ ಏಳು ಪ್ರಯೋಗ ನಡೆದಿದೆ. ಕರ್ನಾಟಕಕ್ಕೆ ಸೋಮವಾರ ಕಾಲಿಟ್ಟಿದ್ದು, 60 ಪ್ರಯೋಗಗಳಾಗಬಹುದು. ಪ್ರಧಾನ ಮಂತ್ರಿ ಮೋದಿ ಪ್ರಶಂಸೆ ಪತ್ರ ಬರೆದಿದ್ದಾರೆಂದರು.

ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಹರಿದಾಸ ಹಬ್ಬ ಸಪ್ತಾಹದ ಆಹ್ವಾನ ಪತ್ರಿಕೆ ಬಿಡುಗಡೆ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ನಗರದ ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ಹರಿವಾಯುಗುರು ಸೇವಾ ಟ್ರಸ್ಟ್ ವತಿಯಿಂದ ಆಚರಿಸುವ ಹರಿದಾಸ ಹಬ್ಬ ಸಪ್ತಾಹದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಟ್ರಸ್ಟ್ ನ ಕಾರ್ಯದರ್ಶಿ

ಚಿತ್ರದುರ್ಗ | ಐಎಂಎ ಅಧ್ಯಕ್ಷರಾಗಿ ಡಾ. ಪಾಲಾಕ್ಷಯ್ಯ ಆಯ್ಕೆ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ಭಾರತೀಯ ವೈದ್ಯಕೀಯ ಸಂಘ (ಐಎಮ್‌ಎ) ಚಿತ್ರದುರ್ಗ ಶಾಖೆಯ 2024-25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಡಾ. ಪಾಲಾಕ್ಷಯ್ಯ ಎಲ್. ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಗರದ ಐಎಂಎ

ಕುಮಾರಸ್ವಾಮಿಯವರು ಹಿಂದೆ ಚುನಾವಣೆಯಲ್ಲಿ ಸೋತಾಗ ಅಭಿಮನ್ಯು ಆಗಿರಲಿಲ್ಲವೇ ? – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 27: ಕುಮಾರಸ್ವಾಮಿಯವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಮಂಡ್ಯದಲ್ಲಿ ಹಾಗೂ ನಂತರ ರಾಮನಗರದಲ್ಲಿ ಸೋತಿದ್ದರು. ಆಗ ಅವರು ಅಭಿಮನ್ಯು ಆಗಿರಲಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮರುಪ್ರಶ್ನಿಸಿದರು. ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಅಭಿಮನ್ಯುವಲ್ಲ, ಅರ್ಜುನನಾಗಿ ಹೊರಹೊಮ್ಮಮಲಿದ್ದಾರೆ

error: Content is protected !!