ಚಿತ್ರದುರ್ಗ,(ಆ.02) ಜಿಲ್ಲೆಯಲ್ಲಿ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ‘ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯು ಪ್ರಾರಂಭವಾಗಿ ಸುಮಾರು 39 ವರ್ಷಗಳನ್ನು ಕಳೆದು 40 ನೇ ವಸಂತಕ್ಕೆ ಕಾಲಿಡುತ್ತಿದ್ದು ಈ ಸಂದರ್ಭದಲ್ಲಿ ಅಜಾಧಿಕ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಕೇವಲ ಒದು ಬರಹ ಅಷ್ಟೆ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಲು ಸಾವಿರಾರು ವಿದ್ಯಾರ್ಥಿಗಳಿಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿ ಕೊಟ್ಟರು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ಆ.03 ರಂದು ನಡೆಯಲಿದೆ.
ಈ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ 40 ನೇ ವರ್ಷದ Destiny -2022’ ಕಾರ್ಯಕ್ರಮಕ್ಕೆ ಜುಲೈ 12 ರಂದು ಮಾನ್ಯ ಶಾಸಕರು ಹಾಗೂ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀಯುತ ಎಮ್ ಚಂದ್ರಪ್ಪನವರು ಅದ್ದೂರಿಯಾಗಿ ಚಾಲನೆಯನ್ನು ನೀಡಿದರು.
ಸುಮಾರು 20 ದಿನಗಳ ಕಾಲ ನಡೆದ ಕ್ರೀಡಾ & ಸಾಂಸ್ಕೃತಿಕ ಹಬ್ಬದಲ್ಲಿ ನೂರಕ್ಕೂ ಅಧಿಕ ಶಾಲೆ-ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಚಿತ್ರದುರ್ಗ ಜಿಲ್ಲೆಯು ಬರಪೀಡಿತ ಜಿಲ್ಲೆಯಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಅಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು ಇಂತಹ ಸಂದರ್ಭದಲ್ಲಿ 1983-84 ರಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯನ್ನು ಶ್ರೀಯುತ ಎಂ. ಚಂದ್ರಪ್ಪರವರು (ಶಾಸಕರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಹಾಗೂ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು) ಎಂ.ಎಂ. ಶಾಲೆಯನ್ನು ಮೊಟ್ಟ ಮೊದಲ ಬಾರಿಗೆ ಪ್ರಾರಂಭ ಮಾಡಿದರು. ಈ ಸಂಸ್ಥೆಯು ತದನಂತರ ವೆಂಕಟೇಶ್ವರ ಬಿ.ಇಡಿ. ಕಾಲೇಜು, ಎಸ್.ಎಲ್.ವಿ. ನರ್ಸಿಂಗ್ ಕಾಲೇಜು, ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು, ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‍ಇ ಹಾಗೂ ಸ್ಟೇಟ್ ಶಾಲೆ, ಎಸ್.ಎಲ್.ವಿ. ಪಿ.ಯು. ಕಾಲೇಜು, ಆದ್ಯ ಫಾರ್ಮಸಿ ಕಾಲೇಜು ಹಾಗೂ ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಿದರು. ಈ ಸಂಸ್ಥೆಯು ಪ್ರಾರಂಭವಾಗಿ ಇಂದಿಗೆ 40 ವರ್ಷಗಳಾಗಿದ್ದು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದಂತಹ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಹಾಗೇ ಈ ಸಂಸ್ಥೆಯಲ್ಲಿ ಸುಮಾರು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಮತ್ತು 1000 ಕ್ಕೂ ಹೆಚ್ಚು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು,
ಈ ಕಾರ್ಯಕ್ರಮವು 20 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಸಿದ್ದು ಇಲ್ಲಿ ನೃತ್ಯ, ಸಂಗೀತ, ರಸಪ್ರಶ್ನೆ, ಬರವಣಿಗೆ ಕೌಶಲ, ಕನ್ನಡ ಭಾಷಾ ಸಾಮಥ್ರ್ಯ, ವೇಷಭೂಷಣ, ವಿಜ್ಞಾನ ವಸ್ತು ಪ್ರದರ್ಶನ, ಚರ್ಚಾಸ್ಪರ್ಧೆ, ಓಟ ಸ್ಪರ್ಧೆ, ವಾಲಿಬಾಲ್, ಥ್ರೋಬಾಲ್, ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್, ಚೆಸ್, ಕೇರಂ ಇನ್ನೂ ಮುಂತಾದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿದಿನ ನಡೆಯಲಿದ್ದು ಅದೇ ದಿನ ಸಂಜೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ವಿತರಣೆ ಮಾಡಲಾಗುವುದು.
ಹಾಗೆಯೇ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ 100 ಜನ ಗಣ್ಯರಿಗೆ ಆಹ್ವಾನಿಸಿ ವಿಶೇಷ ಸನ್ಮಾನ ಹಾಗೂ ಗೌರವ ಸಮರ್ಪಣೆಯನ್ನು ಮಾಡಲಾಯಿತು ಇದು ನಮ್ಮ ಸಂಸ್ಥೆಯ ವಿಶೇಷತೆಯಾಗಿದೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿಗಳು ಆಗಿರುವ ಎಂ.ಸಿ. ರಘುಚಂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.