Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಂಗಳೂರಿನಲ್ಲಿ ಮಾರ್ಚ್ 4 ಮತ್ತು 5 ರಂದು ರಾಜ್ಯ ಮಟ್ಟದ ಗುತ್ತಿಗೆದಾರರ ಸಮ್ಮೇಳನ | ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಭಾಗಿ :  ಮಂಜುನಾಥ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮಾ. 02 :  ಕರ್ನಾಟಕ ರಾಜ್ಯ ಮಟ್ಟದ ಗುತ್ತಿಗೆದಾರರ ಸಂಘದ ಸಮ್ಮೇಳನವು ಮಾ.4 ಮತ್ತು 5 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು ಇದರಲ್ಲಿ ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಚಿತ್ರದುರ್ಗ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮಂಜುನಾಥ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಸಚಿವ ಸಂಪುಟದ ಸದಸ್ಯರುಗಳು ಭಾಗವಹಿಸಲಿದ್ದಾರೆ. 1948 ರಿಂದ ಪ್ರಾರಂಭವಾದ ಈ ಸಂಘವನ್ನು ಹಲವಾರು ಅಧ್ಯಕ್ಷರು ಮುನ್ನಡೆಸುತ್ತಾ ಬಂದಿದ್ದಾರೆ, ಈಗ ಕೆಂಪಯ್ಯನವರು ಅಧ್ಯಕ್ಷರಾಗಿದ್ದು, ಗುತ್ತಿಗೆದಾರರ ಸಮಸೈಗಳಿಗೆ ಸ್ಪಂದಿಸುತ್ತಿದ್ದಾರೆ. ಈ ಸಮಾವೇಶದಲ್ಲಿ ಗುತ್ತಿಗೆದಾರರ ಸಮಸ್ಯೆಗಳಾದ ಜಿ.ಎಸ್.ಟಿ.ಸರ್ಕಾರದಿಂದ ಹಣ ಬಿಡುಗಡೆ, ಪ್ಯಾಕೇಜ್ ಗುತ್ತಿಗೆಯ ಬಗ್ಗೆ ಚರ್ಚೆ ನಡೆಯಲಿದೆ, ಇಲ್ಲಿ ಜಿಎಸ್.ಟಿ.ಯಿಂದ ಗುತ್ತಿಗೆದಾರರ ವಿವಿಧ ರೀತಿಯ ಸಮಸ್ಯೆ ಉಂಟಾಗಿದೆ.

ಇದೇ ರೀತಿ ನಾವು ಮಾಡಿದ ಕೆಲಸಕ್ಕೆ ಸರ್ಕಾರ ಇದುವರೆವಿಗೂ ಹಣವನ್ನು ಬಿಡುಗಡೆ ಮಾಡಿಲ್ಲ ಅಲ್ಲದೆ ಪ್ಯಾಕೇಜ್ ಗುತ್ತಿಗೆ ನೀಡುವಲ್ಲಿ ಅಧಿಕಾರಿಗಲು ಶಾಮಿಲಾಗಿ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ ಇದರಿಂದ ನಮ್ಮ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದು ಇದರ ಬಗ್ಗೆ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಅವರಿಂದ ಇದರ ಬಗ್ಗೆ ತಕ್ಕ ಉತ್ತರವನ್ನು ಪಡೆಬೇಕಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ವಿವಿಧ ಇಲಾಖೆ ಹಾಗೂ ನಗರಸಭೆಯಿಂದ ಸುಮಾರು 380 ಜನ ಗುತ್ತಿಗೆದಾರರಿದ್ದು ಇದರಲ್ಲಿ 350ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಘದಿಂದ ಸಮ್ಮೇಳನಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಘದ ಸದಸ್ಯರು ಸಮಾವೇಶದ ಸ್ಥಳದಲ್ಲಿಯೇ ಹೆಸರನ್ನು ನೊಂದಾಯಿಸಬಹುದಾಗಿದೆ.

ಸಮ್ಮೇಳನಕ್ಕೆ ಬರುವವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದ ಅವರು, ನಮಗೆ ಈ ಸಮಾವೇಶದಲ್ಲಿ ಜಿ.ಎಸ್.ಟಿ. ಬಗ್ಗೆ ಇರುವ ಸಮಸ್ಯೆ ಪರಿಹಾರವಾಗಬೇಕಿದೆ ಸರ್ಕಾರ ನಾವು ಮಾಡಿದ ಕೆಲಸಕ್ಕೆ ಶೀಘ್ರವಾಗಿ ಹಣವನ್ನು ಬಿಡುಗಡೆ ಮಾಡಬೇಕಿದೆ  ಹಾಗೂ ಪ್ಯಾಕೇಜ್ ಗುತ್ತಿಗೆಯನ್ನು ನಮ್ಮ ಸಂಘದವರಿಗೆ ನೀಡುವಮತಾಗಬೇಕಿದೆ ಈ ಸಮಸ್ಯೆಗಳು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಮಂಜುನಾಥ್ ತಿಳಿಸಿದರು.

ಹಿಂದಿನ ಸರ್ಕಾರದಲ್ಲಿ ಭ್ರಷ್ಠಾಚಾರ ಹೆಚ್ಚಾಗಿ ಇತ್ತು ಈಗಿನ ಸರ್ಕಾರದಲ್ಲಿಯೂ ಸಹಾ ಭ್ರಷ್ಠಾಚಾರ ಇದೆ ಆದರೆ ಇಲ್ಲಿ ನೇರವಾಗಿ ಮಂತ್ರಿಗಳು ಭಾಗಿಯಾಗದೇ ಆಧಿಕಾರಿಗಳ ಮೂಲಕ ಪಡೆಯುತ್ತಿದ್ದಾರೆ. ಇದು ತಪ್ಪಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಇರುವ ವಿವಿಧ ರೀತಿಯ ಟೆಂಡರ್ ಗಳನ್ನು ಅವರೇ ಮಾಡಬೇಕು ಟೆಂಡರ್‌ನ್ನು ಅವರು ಪಡೆದು ಬೇರೆಯವರಿಗೆ ಕಾಮಗಾರಿಯನ್ನು ನೀಡಿದರೆ ಅಂತಹರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು.

ಚಿತ್ರದುರ್ಗ ರಸ್ತೆ ಕಾಮಗಾರಿಯಲ್ಲಿ ಅಂದಿನ ದಿನವೇ ನಾವು ರಸ್ತೆ ಮಧ್ಯದಲ್ಲಿ ಡಿವೈಡರ್ ಬೇಡ ಎಂದು ತಿಳಿಸಿದ್ದೆವು. ಇದರ ಬಗ್ಗೆ ಪತ್ರವನ್ನು ಸಹಾ ಬರೆಯಲಾಗಿತ್ತು ಆದರೆ ಅಧಿಕಾರಿಗಳ ಯಾರ ಮಾತನ್ನು ಕೇಳದೇ ರಸ್ತೆ ಮಧ್ಯದಲ್ಲಿ ಅವೈಜ್ಞಾನಿಕವಾಗಿ ಡಿವೈಡರ್‌ಗಳನ್ನು ನಿರ್ಮಾಣ ಮಾಡಿದ್ದಾರೆ ಈಗ ಅದನ್ನು ಒಡೆಯುತ್ತಿದ್ದಾರೆ. ಇದು ಅಧಿಕಾರಿಗಳಿಂದ ಆದ ತಪ್ಪಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷರಾದ ಮಲ್ಲೇಶಪ್ಪ, ರಾಜ್ಯ ನಿರ್ದೇಶಕರಾದ ಕುಮಾರ್, ಹೇಮಂತ್,ಡಿ.ಸಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಜೇಯ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!