ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್
ಮೊ : 87220 22817
ಚಿತ್ರದುರ್ಗ,(ಅ.31) : ಚಿತ್ರದುರ್ಗದ ಹೆಸರನ್ನು ನಾಡಿನಾದ್ಯಂತ್ಯ ಬೆಳಗುವಂತೆ ಮಾಡಿದ ಒನಕೆ ಓಬವ್ವಳ ರಾಜ್ಯ ಮಟ್ಟದ ಜಯಂತಿಯ ಆಚರಣೆಯನ್ನು ಈ ವರ್ಷದಿಂದ ಸರ್ಕಾರವೇ ಆಚರಣೆ ಮಾಡುತ್ತಿದ್ದು ಪ್ರಥಮ ಬಾರಿಗೆ ಚಿತ್ರದುರ್ಗದಲ್ಲಿ ನ. 27 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡರಾದ ಎಸ್.ಸಿ.ನಿರಂಜನ ಮೂರ್ತಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ನಗರದ ವಿಜ್ಞಾನ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಅಂದು ಹೊಳಲ್ಕೆರೆ ರಸ್ತೆಯಿಂದ ಮೆರವಣಿಗೆ ನಡೆಯಲಿದ್ದು ಇದರಲ್ಲಿ ವಿವಿಧ ಜಾನಪದ ಕಲಾಮೇಳಗಳು ಪಾಲ್ಗೊಳ್ಳಲಿವೆ. ಅಂದು ಸುಮಾರು 1 ಲಕ್ಷ ಜನತೆ ನಾಡಿನ ವಿವಿಧ ಕಡೆಯಿಂದ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಮಾಜದ ಚುನಾಯಿತ ಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಇದುವರೆವಿಗೂ ಸಮಾಜದವತಿಯಿಂದ ಒನಕೆ ಓಬವ್ವಳ ಜಯಂತಿಯನ್ನು ಆಚರಣೆ ಮಾಡಲಾಗುತ್ತಿತೂ ಇದೇ ಪ್ರಥಮ ಭಾರಿಗೆ ಸರ್ಕಾರ ಒನಕೆ ಓಬವ್ವಳ ಜಯಂತಿಯನ್ನು ಆಚರಿಸಲು ಮುಂದಾಗಿದೆ, ಇದರ ಅಂಗವಾಗಿ ಅಕೆಯ ನಾಡಾದ ಚಿತ್ರದುರ್ಗದಲ್ಲಿ ಆಚರಣೆ ಮಾಡಲಾಗುತ್ತಿದೆ, ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ ಎಂದು ನಿರಂಜನ ಮೂರ್ತಿ ತಿಳಿಸಿದರು.
ಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಗುರುಮೂರ್ತಿ, ಛಲವಾದಿ ತಿಪ್ಪೇಸ್ವಾಮಿ, ನೆಲ್ಲಿಕಟ್ಟೆ ನಾಗರಾಜ್, ಸುವರ್ಣಮ್ಮ, ಪ್ರದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.