ಕೇರಳ : ಅಂದೊದಿತ್ತು ಕಾಲ. ಮದುವೆ ಅಂದ್ರೆ ಮನೆಯಲ್ಲಿ ಸಂಭ್ರಮ, ದಿನಗಟ್ಟಲೇ ಕೆಲಸ. ಅದು ಒಂದಲ್ಲ ಎರಡಲ್ಲ ಐದಾರು ದಿನ ಮದುವೆ ನಡೆಯೋದು. ಆದ್ರೆ ಬ್ಯುಸಿ ಶೆಡ್ಯೂಲ್ ನಡುವೆ ಇತ್ತೀಚೆಗೆ ಎರಡು ದಿನಕ್ಕೆ ಮದುವೆ ಬಂದು ನಿಂತಿದೆ. ಅದರೀಗ ಅದಕ್ಕೂ ಸಮಯವಿಲ್ಲದಂತಾಗಿದೆ. ಆನ್ಲೈನ್ ನಲ್ಲಿ ಕೇವಲ ಐದು ನಿಮಿಷಕ್ಕೆ ಬಂದಂತಾಗಿದೆ.
ಹೌದು ಆನ್ಲೈನ್ ಮದುವೆಗೆ ಕೇರಳ ಹೈಕೋರ್ಟ್ ಅಸ್ತು ಎಂದಿದೆ. ವಕೀಲ ಜೋಡಿಯೊಂದು ಈ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿತ್ತು. ಅದಕ್ಕೆ ಒಪ್ಪಿಗೆ ಸಿಕ್ಕಂತಾಗಿದೆ. ಈ ಮೂಲಕ ಹೊಸ ಸಂಪ್ರದಾಯವೊಂದು ಹುಟ್ಟಿಕೊಂಡಿದೆ.
ರಿಂತು ತಾಮಸ್ ಮತ್ತು ಅನಂತ ಹರಿಕೃಷ್ಣ ಎಂಬುವವರು ಮದುವೆಯಾಗಲು ನಿಶ್ಚಯ ಮಾಡಿಕೊಂಡಿದ್ದರು. ಅನಂತ ಹರಿಕೃಷ್ಣ ಇಂಗ್ಲೆಂಡ್ ನಲ್ಲಿ ವಿಧ್ಯಾಭ್ಯಾಸಕ್ಕೆಂದು ಹೋಗಿದ್ದಾರೆ. ಡಿಸೆಂಬರ್ 23 ಕ್ಕೆ ಇವರಿಬ್ಬರ ಮದುವೆ ನಿಶ್ಚಯವಾಗಿತ್ತು. ಅದರಂತೆ ಅನಂತ ಹರಿಕೃಷ್ಣ ನಾಯರ್ ವಿಮಾನದ ಟಿಕೆಟ್ ನ್ನ 22ಕ್ಕೆ ಬುಕ್ ಮಾಡಿದ್ದರು. ಆದ್ರೆ ಈ ಒಮಿಕ್ರಾನ್ ಹೆಚ್ಚಳದಿಂದ ಅವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ.
ನಿಗಧಿಯಂತೆ ಮದುವೆಯಾಗಲು ಸಾಧ್ಯವಾಗಿಲ್ಲ. ಈ ಜೋಡಿ ಆನ್ಲೈನ್ ಮದುವೆ ಬಗ್ಗೆ ಯೋಚಿಸಿದ್ದಾರೆ. ಬಳಿಕ ಕೇರಳ ಹೈಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಜೋಡಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಆನ್ಲೈನ್ ಮದುವೆಗೆ ಅಸ್ತು ಎಂದಿದೆ. ಈ ವಿಚಾರ ಜೋಡಿಗೆ ಸಿಕ್ಕಾಪಟ್ಟೆ ಖುಷಿ ತಂದುಕೊಟ್ಟಿದೆ.