ಬೆಂಗಳೂರು: ಸದ್ಯ ದೇಶದೆಲ್ಲೆಡೆ ಕೊರೊನಾ ಮೂರನೆ ಅಲೆ ಭಯದ ಜೊತೆಗೆ ಒಮಿಕ್ರಾನ್ ಭಯವೂ ಹೆಚ್ಚಾಗಿದೆ. ಒಮಿಕ್ರಾನ್ ಬಗ್ಗೆ ಭಯಬೇಡವೆಂದು ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಒಮಿಕ್ರಾನ್ ಶ್ವಾಸಕೋಶಕ್ಕೆ ಹೋಗೋದು ತೀರಾ ಕಡಿಮೆ. ಗಂಟಲಲ್ಲೇ ಉಳಿಯುತ್ತೆ. ಯಾರು ಭಯಪಡಿಯುವ ಅಗತ್ಯವಿಲ್ಲ. ಇನ್ನು ಎರಡು ಡೋಸ್ ಲಸಿಕೆ ಪಡೆದವರ ಮೇಲೆ ಅಷ್ಟಾಗಿ ಪರಿಣಾಮ ಬೀರಲ್ಲ ಎಂದಿದ್ದಾರೆ.
ಕೊರೊನಾ ಹಾಗೂ ರೂಪಾಂತರಿ ಒಮಿಕ್ರಾನ್ ನಿಂದ ಬಚಾವ್ ಆಗಲು, ಜನ ಎರಡು ಡೋಸ್ ಲಸಿಕೆ ಪಡೆಯಬೇಕು. ಮೂರನೇ ಡೋಸ್ ಲಸಿಕೆ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೊರೊನಾ ವಾರಿಯರ್ಸ್, ಫ್ರಂಟ್ ಲೈನ್ ವಾರಿಯರ್ಸ್, ಹಿರಿಯ ನಾಗರಿಕರಿಗೆ ಮೂರನೇ ಡೋಸ್ ನೀಡಲಾಗುತ್ತದೆ. ಕೊರೊನಾ ಬಗ್ಗೆ ಕೂಡ ಯಾರೂ ಭಯ ಪಡುವ ಅಗತ್ಯವಿಲ್ಲ. ಬೇಗ ಹರಡಿ ಬೇಗ ದೂರವಾಗುತ್ತೆ ಎಂದಿದ್ದಾರೆ.