ನವದೆಹಲಿ: ಒಮಿಕ್ರಾನ್ ವೈರಸ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಇದು ಸಹಜವಾಗಿಯೇ ರಾಜ್ಯ ಸರ್ಕಾರಗಳಿಗೆ ಆತಂಕ ತಂದೊಡ್ಡಿದೆ. ಇದೀಗ ದೆಹಲಿ ಕೇಜ್ರಿವಾಲ್ ಸರ್ಕಾರ ಒಮಿಕ್ರಾನ್ ತಡೆಗೆ ಹೊಸ ನಿರ್ಬಂಧವನ್ನೆ ಹೇರಿದೆ.
ಒಮಿಕ್ರಾನ್ ಹೆಚ್ಚಳದ ಭೀತಿಯಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಅಧಿಕಾರಿಗಳೊಂದಿಗೆ ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಒಮಿಕ್ರಾನ್ ಹೆಚ್ಚಳವಾಗುವ ಸೂಚನೆ ಬಗ್ಗೆ ಚರ್ಚೆ ನಡೆಸಿದ್ರು, ಅದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದ್ದಾರೆ.
ಬೆಡ್, ಆಕ್ಸಿಜನ್ ಈ ರೀತಿ ಮೂಲಭೂತ ಸೌಕರ್ಯಗಳನ್ನ ನೋಡಿಕೊಳ್ಳಲು ತಿಳಿಸಿದ್ದಾರೆ. ಜೊತೆಗೆ ಪ್ರತಿದಿನ ಕೊರೊನಾ ಟೆಸ್ಟಿಂಗ್ ಏರಿಕೆ ಮಾಡಲು ಸೂಚಿಸಿದ್ದಾರೆ. ಇದರ ಜೊತೆಗೆ ಸೋಂಕು ಹರಡದಂತೆ ಮುಂಜಾಗ್ರತ ಕ್ರಮಕ್ಕೂ ಮುಂದಾಗಿದ್ದು, ಅದರಂತೆ ಹಲವು ಕಠಿಣ ನಿರ್ಬಂಧ ಹೇರಲಾಗಿದೆ.
ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡೆ, ಸಭೆ ಸಮಾರಂಭ, ಹಬ್ಬ ಆಚರಣೆಗೆ ನಿಷೇಧ ಹೇರಲಾಗಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಶೇ.50 ರಷ್ಟು ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಮದುವೆ ಸಹಿತ ಇತರ ಕಾರ್ಯಕ್ರಮಗಳಿಗೆ ಗರಿಷ್ಠ 200 ಜನರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.