ಬೆಂಗಳೂರು: ಒಂದು ಕಡೆ ಹೊಸ ವರ್ಷದ ಸಂಭ್ರಮ. ಮತ್ತೊಂದು ಕಡೆ ಬೆಲೆ ಏರಿಕೆ ಬಿಸಿ. ಜನವರಿ ಒಂದರಿಂದ ಕೆಲವೊಂದು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಈಗಾಗಲೇ ಕೊರೊನಾ ಸಂಕಷ್ಟದಿಂದ ಜನ ಕಂಗೆಟ್ಟಿದ್ದಾರೆ. ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಮಧ್ಯೆ ಬೆಲೆ ಏರಿಕೆ ಆದ್ರೆ ಜನರ ಸ್ಥಿತಿ ಗತಿ ಹೇಗಿರುತ್ತೆ ಅಲ್ವಾ..?
ಹೊಸ ವರ್ಷ ಅಂತ ಖುಷಿ ಪಡುವ ಹೊತ್ತಲ್ಲೇ ಜನರ ತಲೆ ಕೆಡಿಸಿದೆ. ಓಲಾ ಉಬರ್ ಸೇರಿದಂತೆ ಫುಡ್ ಡೆಲಿವರಿಗಳಾದ ಸ್ವಿಗ್ಗಿ, ಝೊಮ್ಯಾಟೊ ಕೂಡಾ ದುಬಾರಿಯಾಗಿದೆ. ಇದರೊಂದಿಗೆ ಪಾದರಕ್ಷೆ, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ವಸ್ತುಗಳ ಬೆಲೆಯೂ ಏರಿಕೆಯಾಗಿದೆ.
ಅಷ್ಟೇ ಅಲ್ಲ ಹಾಲು, ಹಣ್ಣು, ಕಾಫಿ, ಟೀ, ತಪು ಪಾನೀಯಗಳೊಂದಿಗೆ, ಸೋಪ್, ಪೇಸ್ಟ್‍ಗಳ ಬೆಲೆಯೂ ಮುಂದಿನ 2-3 ತಿಂಗಳುಗಳಲ್ಲಿ ಶೇ.4 ರಿಂದ ಶೇ.10ಕ್ಕೆ ಏರಿಕೆಯಾಗಲಿದೆ. 1,000 ರೂ.ಗೂ ಅಧಿಕ ಬೆಲೆಯ ಪಾದರಕ್ಷೆಗಳ ಮೇಲೆ ಶೇ.12ರಷ್ಟು ಜಿಎಸ್‍ಟಿ ದರವನ್ನು ವಿಧಿಸಲಾಗಿದೆ. ಇದರ ಬೆಲೆ ಏರಿಕೆಯೂ ಜನವರಿ 1 ರಿಂದಲೇ ಅನುಷ್ಠಾನವಾಗಿದೆ.