ಬೆಂಗಳೂರು: ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದ್ದನ್ನು ನೋಡಿ ನೋಡಿ ಗ್ರಾಹಕರು ಸುಸ್ತಾಗಿದ್ದರು. ಯಾವಾಗಪ್ಪ ತೈಲ ಬೆಲೆ ಇಳಿಯುತ್ತೆ ಅಂತ ಕಾಯ್ತಾ ಇದ್ರು. ಇದೀಗ ಕೊಂಚ ನಿಟ್ಟುಸಿರು ಬಿಡುವಂತಾಗಿದ್ದು, ತೈಲ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ, ಪೆಟ್ರೋಲ್‍ಗೆ 13.30 ರೂ. ಮತ್ತು ಡೀಸೆಲ್ 19.47 ರೂ ಕಡಿತಗೊಳಿಸಿ ಹೊಸ ದರ ಪ್ರಕಟಿಸಿದೆ. ಈ ಮೂಲಕ ಪೆಟ್ರೋಲ್ ಹೊಸ ದರ ಲೀ. 100.63 ರೂ. ಮತ್ತು ಡೀಸೆಲ್ ಹೊಸ ದರ ಲೀ. 85.03 ರೂ.ಗೆ ಇಳಿಕೆ ಕಂಡು ಸಾರ್ವಜನಿಕರಿಗೆ ಸಂತಸ ತರಿಸಿದೆ.
ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆಯ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ದೀಪಾವಳಿ ಶುಭಾಶಯವನ್ನು ತಿಳಿಸಿದ್ದರು. ಕೊಟ್ಟ ಮಾತುನಂತೆ ಇಂದು ಅಧಿಕೃತವಾಗಿ ಬೆಲೆ ಇಳಿಕೆ ಆದೇಶ ಹೊರಡಿಸಿದ್ದಾರೆ.