ಜುಲೈ 11ಕ್ಕೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ : ಮಾರಸಂದ್ರ ಮುನಿಯಪ್ಪ

suddionenews
1 Min Read

ವರದಿ : ಸುರೇಶ್ ಪಟ್ಟಣ್ 

ಚಿತ್ರದುರ್ಗ,(ಜು.02) : ಸರ್ಕಾರ ನಾಗ ಮೋಹನ್ ದಾಸ ವರದಿಯನ್ನು ಜಾರಿ ಮಾಡುವಲ್ಲಿ ಮೀನಾಮೇಷ ಮಾಡುತ್ತಿದೆ, ಇದರ ಬಗ್ಗೆ ಶ್ರೀಗಳು ಧರಣಿಯನ್ನು ನಡೆಸುತ್ತಿದ್ದು ಇದನ್ನು ಸಹಾ ಸರ್ಕಾರ ನಿರ್ಲಕ್ಷ ಮಾಡಿದೆ. ಇದನ್ನು ಪ್ರತಿಭಟಿಸಿ ಜು.11 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯನ್ನು ಮುತ್ತಿಗೆ ಹಾಕಲಾಗುವುದು ಎಂದು ಬಿಎಸ್‍ಪಿಯ ರಾಜ್ಯ ಸಂಯೋಜಕರು, ಕರ್ನಾಟಕ ಉಸ್ತುವಾರಿಗಳಾದ ಮಾರಸಂದ್ರ ಮುನಿಯಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್.ಸಿ. ಮತ್ತು ಎಸ್.ಟಿ. ಜನಾಂಗಕ್ಕೆ ಅನುಕೂಲವಾಗುವ ನಾಗ ಮೋಹನದಾಸ್ ವರದಿಯನ್ನು ಜಾರಿ ಮಾಡುವಂತೆ ಆಗ್ರಹಿಸಿ ನಾಯಕ ಜನಾಂಗದ ಶ್ರೀಗಳು ಬೆಂಗಳೂರಿನಲ್ಲಿ ಧರಣಿಯನ್ನು ನಡೆಸುತ್ತಿದ್ದು ಇಂದಿಗೆ 143 ದಿನವಾಗಿದೆ. ಇಷ್ಟಾದರೂ ಸಹಾ ಸರ್ಕಾರ ಇದುವರೆವಿಗೂ ಮುಖ್ಯಮಂತ್ರಿಗಳಾದಿಯಾಗಿ ಬಂದು ಬರೀ ಆಶ್ವಾಸನೆಯನ್ನು ನೀಡಿದ್ದಾರೆ ಹೊರೆತು ಭರವಸಯನ್ನು ಈಡೇರಿಸಿಲ್ಲ.

ನಾಗಮೋಹನದಾಸ್ ವರದಿಯಲ್ಲಿ ಎಸ್.ಸಿ. ಎಸ್.ಟಿ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಳ ಮಾಡುವಂತೆ ವರದಿಯನ್ನು ನೀಡಿದೆ ಇದನ್ನು ಮಾಡುವಲ್ಲಿ ಸರ್ಕಾರ ಮೀನಾಮೇಷ ಮಾಡುತ್ತಿದೆ. ಬೇರೆಯ ಜನಾಂಗದವರು ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಕೇಳದಿದ್ದರೂ ಸಹಾ ಅವರಿಗೆ ಮೀಸಲಾತಿಯಲ್ಲಿ ಹೆಚ್ಚಳ ಮಾಡಿದ್ದಾರೆ ಎಂದು ದೂರಿದರು.

ಸರ್ಕಾರ ಇದುವರೆವಿಗೂ ನಮ್ಮ ಮಾತನ್ನೂ ಕೇಳಿಲ್ಲ ಇದನ್ನು ಪ್ರತಿಭಟಿಸಿ ಜು.11 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಹಾ ಜಿಲ್ಲಾಧಿಕಾರಿಗಳ ಕಚೇರಿಯನ್ನು ಮುತ್ತಿಗೆ ಹಾಕುವುದರ ಮೂಲಕ ನ್ಯಾಯವನ್ನು ಪಡೆಯುತ್ತೇವೆ. ಈ ಸಮಯದಲ್ಲಿ ಏನಾದರೂ ಅದರೆ ನಾವು ಹೊಣೇಗಾರರಲ್ಲ ಇದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ. ಸಂವಿಧಾನ ಬದ್ದವಾದ ಮೀಸಲಾತಿ ಹೆಚ್ಚಳ ಸಮಸ್ಯೆಯನ್ನು ಬಗರಹರಿಸದೇ ಸರ್ಕಾರ ವಿಳಂಭ ಮಾಡುತ್ತಿದೆ ಇದನ್ನು ನಾವು ಸಹಿಸುವುದಿಲ್ಲ ಎಂದು ಮುನಿಯಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ನಾಯಕ ಜನಾಂಗದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್, ಬಿಎಸ್.ಪಿ.ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಗೀರೀಶ್, ರಾಜ್ಯ ಪ್ರಧಾನ ಕಾರ್ಯದರ್ಶೀ ಅಶೋಕ ಚಕ್ರವರ್ತಿ, ರಾಜ್ಯ ಕಾರ್ಯದರ್ಶಿ ಪ್ರಕಾಶ್, ವಾಲ್ಮೀಕಿ ಸಮಾಜದ ಮುಖಂಡರಾದ ಶ್ರೀನಿವಾಸ್, ಯಶೋಧ, ಶಿವಪ್ಪ, ಅರುಣ್ ಕುಮಾರ್, ಕಾಂತಣ್ಣ, ರಾಜು, ನಗರಸಭಾ ಸದಸ್ಯರಾದ ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *