ಬೆಂಗಳೂರು: ಟ್ರೋಲ್ ಪೇಜಸ್ ಗಳಿಂದ ಸಾಕಷ್ಟು ಜನ ಮನಸ್ಸುಗೆ ಬೇಸರ ಮಾಡಿಕೊಂಡಿರುವ ಉದಾಹರಣೆಗಳಿವೆ. ಅದರಲ್ಲೂ ಸೆಲೆಬ್ರೆಟಿಗಳಂತು ಸಾಕಷ್ಟು ಮಾನಸಿಕ ನೋವು ಅನುಭವಿಸಿದ್ದು ಇದೆ. ಸಣ್ಣಮಟ್ಟದ ವಿಚಾರವನ್ನು ದೊಡ್ಡದು ಮಾಡುವ ಸಾಮರ್ಥ್ಯವೂ ಇದೆ, ಮನರಂಜನೆಯನ್ನು ನೀಡುವ ಸಾಮರ್ಥ್ಯವೂ ಟ್ರೋಲ್ ಪೇಜ್ ಗಳಿಗಿದೆ. ಆದರೆ ಆಯ್ಕೆ ಯಾವುದೆಂದು ತಿಳಿದಿರಬೇಕಾಗುತ್ತದೆ. ಇದೀಗ ಫೋಟೋ ಬಳಕೆಯ ವಿಚಾರಕ್ಕೆ ವಿನಯ್ ಗುರೂಜಿ ಟ್ರೋಲ್ ಪೇಜ್ ಗಳ ವಿರುದ್ಧ ದೂರು ನೀಡಿದ್ದಾರೆ.
ಕೆಪಿಸಿಸಿ ಆನೇಕಲ್ ವಿಭಾಗದ ಸೋಷಿಯಲ್ ಮೀಡಿಯಾ ವಿಂಗ್ ಹಾಗೂ ಹಲವು ಯೂಟ್ಯೂಬ್ ಚಾನೆಲ್ ಗಳ ಮೇಲೆ ದೂರು ದಾಖಲಿಸಿದ್ದಾರೆ. ಸುಮಾರು 22 ಕ್ಕೂ ಹೆಚ್ಚು ಪೇಜ್ ಗಳ ಮೇಲೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಗುರೂಜಿಗೆ ಸಂಬಂಧಿಸಿದ ಆಕ್ಷೇಪಾರ್ಹ ಫೋಟೋವೊಂದು ವೈರಲ್ ಆಗಿತ್ತು. ವೈರಲ್ ಆದ ಫೊಟೋಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗಿದೆ. ಹೀಗಾಗಿ ಟ್ರೋಲ್ ಪೇಜ್ ಗಳ ಮೇಲೆ ದೂರು ನೀಡಿದ್ದಾರೆ
ಆ ಫೋಟೋಗಳಿಗೆ ಬಂದ ಕೆಟ್ಟ ಕಮೆಂಟ್ಸ್ ನಿಂದಾಗಿ ಗುರೂಜಿಯ ತೇಜೋವಧೆಯಾಗಿದೆ ಎಂದು ದೂರು ನೀಡಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಈ ರೀತಿ ಮಾಡುತ್ತಿರುವ ಟ್ರೋಲ್ ಪೇಜ್ ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ವಿನಯ್ ಗುರೂಜಿ ಮನವಿ ಮಾಡಿದ್ದಾರೆ. ಈ ರೀತಿ ಕೆಟದಟ ಕಮೆಂಟ್ಸ್ ಮಾಡುವುದರಿಂದ ಭಕ್ತರ ಮನಸ್ಸಿಗೆ ಘಾಸಿಯಾಗುತ್ತದೆ ಎಂದಿದ್ದಾರೆ.