ರಾಜಸ್ಥಾನ : ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ. ಜೊತೆಗೆ ಮದುವೆ ಬಗ್ಗೆ ಎಲ್ಲರೂ ಸಾಕಷ್ಟು ಕನಸುಗಳನ್ನ ಇಟ್ಕೊಂಡಿರ್ತಾರೆ. ಆದ್ರೆ ಮದುವೆಯಾಗಿ ಕನಸುಗಳನ್ನ ಇಟ್ಕೊಂಡು ಬಂದ ಹೆಂಡತಿಯನ್ನೇ ಅಲ್ಲೊಬ್ಬ ಮಾರಿದ್ದಾನೆ.. ಅದು ಆತ ಇನ್ನು ಬಾಲಕ.
ಎಸ್.. ಈ ಘಟನೆ ನಡೆದಿರೋದು ರಾಜಸ್ಥಾನದ ಒಡಿಸ್ಸಾದ ಸುಲೆಕೆಲಾ ಗ್ರಾಮದ ನಿವಾಸಿಯೊಬ್ಬ ಹೆಂಡತಿಯನ್ನೇ ಮಾರಿದ್ದಾನೆ. ಆತನಿಗೆ ಇನ್ನು 17 ವರ್ಷ. ಆದ್ರೆ ಸೋಷಿಯಲ್ ಮೀಡಿಯಾದಲ್ಲೇ ಹುಡುಗಿಯೊಬ್ಬಳನ್ನ ಪರಿಚಯ ಮಾಡಿಕೊಂಡಿದ್ದಾನೆ. ಆಮೇಲೆ ಮನೆಯವರನ್ನ ಒಪ್ಪಿಸಿ, ಮದುವೆಯಾಗಿದ್ದಾನೆ.
ರಾಜಸ್ಥಾನದಿಂದ ಝಾನ್ಸಿಗೆ ತೆರಳಿದ ಗಂಡ ಹೆಂಡತಿ, ಅಲ್ಲಿ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಅದು 1,80,000 ಹಣಕ್ಕೆ ಮಾರಿದ್ದಾನೆ. ಆ ಹಣದಲ್ಲೇ ಕಾಸ್ಟ್ಲೀ ಫೋನ್ ತೆಗೆದುಕೊಂಡಿದ್ದಾನೆ. ಅಷ್ಟೇ ಅಲ್ಲ ಹೆಂಡತಿ ಮನೆಗೆ ಕರೆ ಮಾಡಿ, ನಿಮ್ಮ ಮಗಳು ಯಾರದ್ದೋ ಜೊತೆಗೆ ಓಡಿ ಹೋಗಿದ್ದಾಳೆ ಎಂದು ಕಂಪ್ಲೈಂಟ್ ಮಾಡಿದ್ದಾನೆ.
ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಬೆಲ್ಪಡ ಪೊಲೀಸರು ಮಹಿಳೆಯನ್ನ ರಕ್ಷಿಸಿದ್ದಾರೆ. ತನಿಖೆಯ ವೇಳೆ ಆತ ಮಾರಿದ್ದು, ಬೆಳಕಿಗೆ ಬಂದಿದೆ.