ಕೋಲ್ಕತಾ: ನಟಿ, ಟಿಎಂಸಿ ಪಕ್ಷದ ಸಂಸದೆ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ ಆ ಮಗುವಿನ ತಂದೆ ಯಾರು ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ಮದುವೆಯಾದ ಬಳಿಕ, ನುಸ್ರತ್ ಗರ್ಭಿಣಿಯಾದ ಮೇಲೆ ಗಂಡ ಹೆಂಡತಿಯಲ್ಲಿ ಬಿರುಕು ಮೂಡಿತ್ತು. ಮಗು ನನ್ನದಲ್ಲ ಅಂತ ನುಸ್ರತ್ ಗಂಡ ನೇರವಾಗಿಯೇ ಹೇಳಿದ್ರು. ಇದೀಗ ಮಗುವಿಗೆ ಜನ್ಮ ನೀಡಿದ್ದಾರೆ. ಸಹಜವಾಗಿಯೇ ಮಗುವಿನ ತಂದೆ ಬಗ್ಗೆ ಒಂದಷ್ಟು ಕ್ಯೂರಿಯಾಸಿಟಿ ಪ್ರಶ್ನೆಗಳು ಎದುರಾಗಿವೆ.
ಹೆರಿಗೆಯಾದ ಬಳಿಮ ಇಂದು ನಿಸ್ರತ್ ಮಾಧ್ಯಮದವರ ಮುಂದೆ ಮನಬಿಚ್ಚಿ ಮಾತಾಡಿದ್ದಾರೆ. ಈ ವೇಳೆ ಮಗುವಿನ ತಂದೆ ಬಗ್ಗೆ ಪ್ರಶ್ನೆ ಎದುರಾದಾಗ, ಮಗುವಿನ ತಂದೆ ಯಾರು ಅನ್ನೋದು ಮಗುವಿನ ತಂದೆಗೆ ಮಾತ್ರ ಗೊತ್ತು ಎಂದಿದ್ದಾರೆ.
ಇನ್ನು ಮಗುವಿನ ಫೋಟೋ ರಿವಿಲ್ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮಗುವಿನ ತಂದೆ ಹೇಳಿದಾಗ ರಿವೀಲ್ ಮಾಡ್ತೇನೆ. ಅವರ ತಂದೆ ಈಗ್ಲೇ ಬೇಡ ಅಂದಿದ್ದಾರೆ ಎಂದಿದ್ದಾರೆ. ಜೊತೆಗೆ ಮಗುವಿನ ಜೊತೆಗೆ ಯಶ್ ದಾಸ್ ಹಾಗೂ ನಾನು ಚೆನ್ನಾಗಿದ್ದೇವೆ ಎಂದಿದ್ದಾರೆ.
ಯಶ್ ದಾಸ್ ನಿಂದಲೇ ನುಸ್ರತ್ ಸಂಸಾರದಲ್ಲಿ ಬಿರುಗಾಳಿ ಬೀಸಿತ್ತು ಎನ್ನಲಾಗಿದೆ. ಅವರಿಬ್ಬರ ಓಡಾಟದಿಂದ ಪತಿ ದೂರಾದ್ರು ಎನ್ನಲಾಗಿದೆ. ಹೀಗಿರುವಾಗ ಯಶ್ ದಾಸ್, ನಾನು ಮಗು ಜೊತೆ ಖುಷಿಯಾಗಿದ್ದೇವೆ ಎಂಬ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.