ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ರಾಹುಲ್ ಗಾಂಧಿ ಇಂದು ಇಡಿ ಕಚೇರಿಗೆ ವಿಚಾರಣೆಯಲ್ಲಿ ಹಾಜರಾಗಲು ಹೊರಟಿದ್ದಾರೆ. ಪಾದಯಾತ್ರೆ ಮೂಲಕ ಎಐಸಿಸಿ ಕಚೇರಿಯಿಂದ ಹೊರಟಿದ್ದಾರೆ. ಪ್ರಿಯಾಂಕ ಗಾಂಧಿ ಇಂದು ರಾಹುಲ್ ಗಾಂಧಿಗೆ ಜೊತೆಯಾಗಿದ್ದಾರೆ.
ರಾಹುಲ್ ಗಾಂಧಿಯವರ ಜೊತೆ ನಾವಿದ್ದೇವೆ ಎಂಬುದನ್ನು ಪ್ರೂವ್ ಮಾಡಲು ರಾಜ್ಯದಿಂದಲೂ ನಾಯಕ ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ಜೊತೆಯಾಗಿದ್ದಾರೆ. ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಘೋಷಣೆಯನ್ನು ಕೂಗುತ್ತಿದ್ದಾರೆ. ರಾಹುಲ್ ಗಾಂಧಿಯವರನ್ನು ಉದ್ದೇಶ ಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ. ಈ ಮಧ್ಯೆ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಡಿಕೆ ಶಿವಕುಮಾರ್ ಬಿಜೆಪಿ ಮೇಲೆ ಹರಿಹಾಯ್ದಿದ್ದು, ಈ ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿದ್ದಂತ ಪೇಪರ್ ನ್ಯಾಷನಲ್ ಹೆರಾಲ್ಡ್. ಆ ಬಳಿಕ ಕಾಂಗ್ರೆಸ್ ಪಾರ್ಟಿ ನಡೆಸುತ್ತಾ ಬಂದಿದೆ. ನಡೆಸುವಾಗ ಸಾಲ ಅದು ಇದು ಇತ್ತು. ಅದಕ್ಕೆ ಈಗಾಗಲೇ ಟ್ಯಾಕ್ಸ್ ಎಲ್ಲಾ ಕ್ಲಿಯರ್ ಮಾಡಿದ್ದಾರೆ. ಯಾರೋ ದೂರು ಕೊಟ್ಟಿದ್ದರು ಎಂದು ಈ ಬಗ್ಗೆ ಈ ರೀತಿಯೆಲ್ಲಾ ಮಾಡಿದರೇ ಹೇಗೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಸ್ಥಾನ ತ್ಯಾಗ ಮಾಡಿದ್ದಾರೆ. ಅವರಿಗೆ ಇಂಥ ಕಿರುಕುಳ ಕೊಟ್ಟರೆ ಹೇಗೆ. ಯಾರು ಕೂಡ ಇದನ್ನು ಕ್ಷಮಿಸಲ್ಲ ಎಂದಿದ್ದಾರೆ.