ಬೆಂಗಳೂರು: ಗೋವಿಂದರಾಜನಗರ ಪ್ರತಿನಿಧಿಸುತ್ತಿದ್ದ ವಿ ಸೋಮಣ್ಣ ಅವರಿಗೆ ಈ ಬಾರಿ ಚಾಮರಾಜನಗರ ಹಾಗೂ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿತ್ತು. ಆದ್ರೆ ಎರಡು ಕ್ಷೇತ್ರದಲ್ಲಿ ಸೋತಿದ್ದಾರೆ. ಈ ಬಗ್ಗೆ ಮಾತನಾಡಿದ್ದು, ಸೋತಿದ್ದೇನೆ ಏನು ಮಾಡುವುದಕ್ಕೆ ಆಗುತ್ತೆ. ಹೈಕಮಾಂಡ್ ಹೇಳಿದ್ರು ಅಂತ ನಿಂತೆ ಅಷ್ಟೇ ಎಂದಿದ್ದಾರೆ.
ನನ್ನ ಕ್ಷೇತ್ರ ಗೋವಿಂದರಾಜನಗರ ಚಿನ್ನದಂತೆ ಇತ್ತು. ಆದರೆ ಹೈಕಮಾಂಡ್ ಸೂಚನೆ ಮೇರೆಗೆ ಚಾಮರಾಜನಗರ ಮತ್ತೆ ವರುಣಾದಲ್ಲಿ ನಿಂತೆ. ಚಾಲೆಂಜ್ ಆಗಿ ತಗೊಂಡೆ. ಆದ್ರೂ ಸೋತೆ. ಏನು ಮಾಡುವುದಕ್ಕೆ ಆಗುತ್ತೆ. ಈಗ ನಾನು ನಿರುದ್ಯೋಗಿ ಆಗಿದ್ದೀನಿ. ನಾನು ಸೋಲನ್ನು ಒಪ್ಪಿಕೊಂಡಿದ್ದೀನಿ. ಒಳ್ಳೆಯವರನ್ನು ಯಾರು ಗುರುತಿಸಲ್ಲ. ಕಾಂಗ್ರೆಸ್ ನ ಗ್ಯಾರಂಟಿ ಸ್ಕಿಂಗಳಿಂದಾನೇ ಇವತ್ತು ಅವರಿಗೆ ಗೆಲುವು ಸಿಕ್ಕಿದ್ದು.
ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಿರಿಯರು. ಅವರನ್ನೇ ಕೇಳಿ ವೀರಶೈವ ಸಮುದಾಯದ ಮತ ವಿಭಜನೆ ಯಾಕಾಯಿತು ಎಂದು. ನಾನು ಸಾಯುವ ತನಕ ಸಕ್ರೀಯ ರಾಜಕಾರಣಿಯಾಗಿಯೇ ಇರುತ್ತೀನಿ. ನಿವೃತ್ತಿ ಅನ್ನೋ ಪದ ನನ್ನತ್ರ ಇಲ್ಲ. ನಿವೃತ್ತಿ ಅನ್ನೋದೆಲ್ಲಾ ನಾಟಕ. ನಿವೃತ್ತಿ ಎಷ್ಟು ಜನ ತಗೊಂಡಿದ್ದಾರೆ ಹೇಳಿ ಎಂದಿದ್ದಾರೆ.