Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಇನ್ಮೇಲೆ ಜಿಎಸ್ಟಿಯಿಂದ ಮುಕ್ತಿ : ಯಾವೆಲ್ಲಾ ವಸ್ತುಗಳಿಗೆ ಜಿಎಸ್ಟಿ ಇರೋದಿಲ್ಲ..?

---Advertisement---

ಬೆಂಗಳೂರು: ತಿನ್ನೋದಕ್ಕೆ ಹೋದ್ರು, ಟೀ ಕಾಫಿ ಕುಡಿಯೋದಕ್ಕೆ ಹೋದ್ರು ಈ ಜಿಎಸ್ಟಿ ಕಟ್ಟಿ ಕಟ್ಟಿ ಜನ ರೋಸೆದ್ದು ಹೋಗಿದ್ದಾರೆ. ಇದೀಗ ಕೇಂದ್ರ ಸರ್ಕಾರದಿಂದ ಕೆಲವೊಂದಿಷ್ಟು ವಸ್ತುಗಳ ಮೇಲೆ ಜಿಎಸ್ಟಿ ದರವನ್ನ ಇಳಿಕೆ ಮಾಡಿದೆ. ಇದು ಜನ ಸಾಮಾನ್ಯರಿಗೆ ಕೊಂಚ ನೆಮ್ಮದಿಯನ್ನ ನೀಡಿದೆ. ಹಾಗಾದ್ರೆ ಕೇಂದ್ರ ಸರ್ಕಾರ ಯಾವೆಲ್ಲಾ ವಸ್ತುಗಳ ಮೇಲೆ ಜಿಎಸ್ಟಿಯನ್ನ ಕಡಿಮೆ ಮಾಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

5% ಜಿಎಸ್ಟಿ ಯಾವುದರ ಮೇಲೆ ಆಗಿದೆ ಎಂಬುದನ್ನ ನೋಡುವುದಾದರೆ, ಹೇರ್ ಆಯಿಲ್, ಶಾಂಪೂ, ಟೂತ್ ಪೇಸ್ಟ್, ಟೂತ್ ಬ್ರೆಶ್, ಬೆಣ್ಣೆ, ತುಪ್ಪ, ಮೆಡಿಕಲ್ ವಸ್ತು, ಥರ್ಮಾಮೀಟರ್, ಡಯಾಗ್ನೋಸ್ಟಿಕ್ ಕಿಟ್, ಆರೋಗ್ಯ ಪರೀಕ್ಷಾ ಸಲಕರಣೆಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ಈ ಹಿಂದೆ ಇದ್ದ ಜಿಎಸ್ಟಿಗಿಂತ 5%ಗೆ ಇಳಿಕೆ ಮಾಡಲಾಗಿದೆ. ಕೆಲವೊಂದು ವಸ್ತುಗಳ ಮೇಲೆ ಜಿಎಸ್ಟಿಯನ್ನೇ ತೆಗೆದಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವ ಭಾಷಣದ ಸಂದರ್ಭದಲ್ಲಿ ಮಾತನಾಡಿದ್ದರು. ಜಿಎಸ್ಟಿಯಲ್ಲಿ ಮುಂದಿನ ಪೀಳಿಗೆಗಾಗಿ ಕೆಲವೊಂದು ಮಹತ್ವದ ಸುಧಾರಣೆಗಳನ್ನು ತರುವ ನಮ್ಮ ಉದ್ದೇಶದ ಬಗ್ಗೆ ಮಾತನಾಡಿದ್ದೆ. ಸಾಮಾನ್ಯ ಜನರುಗೆ ಜೀವನ ಸುಗಮಗೊಳಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನ ಹೊಂದಿರುವ ವಿಶಾಲ ಆಧಾರಿತ ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆ ಮತ್ತು ಈ ಪ್ರಕ್ರಿಯೆಯ ಸುಧಾರಣೆಗಾಗಿ ಕೇಂದ್ರ ಸರ್ಕಾರವು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದರು. ಸದ್ಯ ಜಿಎಸ್ಟಿ ದರದಲ್ಲಿ ಇಳಿಕೆ ಮಾಡಿದ್ದು, ಜನ ಸಮಾನ್ಯರು ಖುಷಿ ವ್ಯಕ್ತಪಡಿಸಿದ್ದಾರೆ. ಪ್ರತಿದಿನದ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಇಳಿಕೆಯಾಗಿದ್ದು, ಜನ ಸಾಮಾನ್ಯರ ಮುಖದಲ್ಲಿ ನೆಮ್ಮದಿಯ ಭಾವ ತರಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...