ನವದೆಹಲಿ: ಹೆಲ್ಮೆಟ್ ಹಾಕದೆ ಗಾಡಿ ಚಲಾಯಿಸುವುದು ಅಪರಾಧ. ಅಷ್ಟೆ ಅಲ್ಲ ಜೀವಕ್ಕೆ ಹಾನಿ ಕೂಡ. ಆದರೆ ಹೆಲ್ಮೆಟ್ ಹಾಕಬೇಕಲ್ಲ ಅಂತ ಯಾವ್ ಯಾವುದೋ ಹೆಲ್ಮೆಟ್ ಹಾಕಿದರೂ ದಂಡ ಕಟ್ಟುವುದು ಗ್ಯಾರಂಟಿಯಾಗಿದೆ. ಬರೋಬ್ಬರಿ ಎರಡು ಸಾವಿರ ರೂಪಾಯಿ ದಂಡ.
ಹೆಲ್ಮೆಟ್ ಹಾಕುವ ಮುನ್ನ ಇದನ್ನೊಮ್ಮೆ ಚೆಕ್ ಮಾಡಿಕೊಳ್ಳಿ. ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಬಳಸುವ ಹಾಗಿಲ್ಲ ನಾರ್ಮಲ್ ಹೆಲ್ಮೆಟ್ ಬಳಸಿ ಸಿಕ್ಕಿಬಿದ್ದರೆ, ಪೊಲೀಸರಿಂದ ದಂಡ ಹಾಕಿಸಿಕೊಳ್ಳುವುದು ಖಚಿತವಾಗುತ್ತದೆ. ಮೋಟಾರು ವಾಹನ ಕಾಯ್ದೆಯಡಿ ದಂಡವನ್ನು ಹೆಚ್ಚು ಮಾಡಲಾಗಿದೆ ಸಂಚಾರಿ ನಿಯಮ ಉಲ್ಲಂಘನೆ ಮತ್ತು ಸರಿಯಾದ ಹೆಲ್ಮೆಟ್ ಧರಿಸದೆ ಹೋದರೆ ಅಂಥವರಿಗೆ 2 ಸಾವಿರ ದಂಡ ವಿಧಿಸಲಾಗುತ್ತದೆ.
ವಾಹನ ಚಲಾಯಿಸುವಾಗ ಬ್ಯಾಂಡ್ ಬಕಲ್ ಬಿಚ್ಚಿದರು ಅದಕ್ಕೆ ದಂಡ ವಿಧಿಸಲಾಗುತ್ತದೆ. 1 ಸಾವಿರ ದಂಡ ತೆರಬೇಕಾಗುತ್ತದೆ. ಹೆಲ್ಮೆಟ್ ಧರಿಸಿಯೂ ಸಿಗ್ನಲ್ ಜಂಪ್ ಮಾಡಿದರೆ 2 ಸಾವಿರ ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ದಂಡ ಕಟ್ಟುವುದಕ್ಕೆ ಎಚ್ಚರದಿಂದ ಗಾಡಿ ಓಡಿಸಿ. ಜೊತೆಗೆ ಐಎಸ್ಐ ಮಾರ್ಕ್ ಇರುವಂತ ಹೆಲ್ಮೆಟ್ ಅನ್ನೇ ಖರೀದಿಸಿ.