ಶ್ರೀಶೈಲ ಭಕ್ತರಿಗೆ ಸೂಚನೆ ಮಾರ್ಚ್ 1 ರಿಂದ 11 ರವರೆಗೆ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮೋತ್ಸವ

1 Min Read

 

ಚಿತ್ರದುರ್ಗ. ಫೆ.26: ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ  ಮಹಾಕ್ಷೇತ್ರದಲ್ಲಿ ಮಾರ್ಚ್ 1 ರಿಂದ 11 ರವರೆಗೆ ಮಹಾಶಿವರಾತ್ರಿ ಬ್ರಹ್ಮರಥೋತ್ಸವ ಜರುಗಲಿದೆ.

ಈ ಉತ್ಸವ ನಿರ್ವಹಣೆಗಾಗಿ ವಿವಿಧ ವಿಸ್ತøತವಾದ ಏರ್ಪಾಟುಗಳನ್ನು ಮಾಡಲಾಗಿದ್ದು,  ಬ್ರಹ್ಮೋತ್ಸವದಲ್ಲಿ ಭಕ್ತರ ಜನದಟ್ಟಣೆಯ ನಿಯಂತ್ರಿಸುವ ಸದುದ್ದೇಶದಿಂದ ಭಕ್ತರಿಗೆ ಸ್ವಾಮಿಯ ಅಲಂಕಾರ ದರ್ಶನಕ್ಕೆ ಮಾತ್ರ ಅವಕಾಶ ನೀಡಿದೆ. ಭಕ್ತಾಧಿಗಳಿಗೆ ಉಚಿತ ದರ್ಶನವಲ್ಲದೇ, ಶೀಘ್ರ ದರ್ಶನಕ್ಕಾಗಿ ರೂ.200/, ಅತಿ ಶೀಘ್ರ ದರ್ಶನಕ್ಕಾಗಿ ರೂ.500/ ಪಾವತಿಸಬೇಕಾಗುತ್ತದೆ. ಈ ಟಿಕಟ್‍ಗಳನ್ನು  ದೇವಸ್ಥಾನದ ವೆಬ್‍ಸೈಟ್ www.srisailadevasthanam.org    ಮೂಲಕ ಆನ್‍ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇಲ್ಲವೇ ದೇವಸ್ಥಾನದ ಕರೆಂಟ್ ಬುಕ್ಕಿಂಗ್ ಮೂಲಕ ತಕ್ಷಣವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬ್ರಹ್ಮೋತ್ಸವದ ಪ್ರಾರಂಭದ ಐದು ದಿನಗಳು ಅಂದರೆ ಮಾರ್ಚ್ 1 ರಿಂದ 5 ರವರೆಗೆ ಜ್ಯೋತಿರ್ಮುಡಿ (ಇರುಮುಡಿ) ಇರುವ ಶಿವದೀಕ್ಷಾ ಭಕ್ತರಿಗೆ ಮಾತ್ರ ಹಂತ ಹಂತವಾಗಿ ನಿರ್ದಿಷ್ಟ ಸಮಯದಲ್ಲಿ ಸ್ವಾಮಿಯ ಉಚಿತ ಸ್ಪರ್ಶ್ ದರ್ಶನ ಕಲ್ಪಿಸಲಾಗುತ್ತದೆ. ಬ್ರಹ್ಮೋತ್ಸವ ಮುಗಿಯುವವರೆಗೂ ಎಲ್ಲಾ ಅರ್ಜಿತ (ಸಂಚಿತ) ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಶ್ರೀಶೈಲ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಿ. ಪೆದ್ದಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *