ಬೆಂಗಳೂರು: ಡಿಕೆ ಶಿವಕುಮಾರ್ ಗೆ ಅದ್ಯಾಕೋ ಇಡಿಯ ನಂಟು ಕಡಿಮೆಯಾಗುತ್ತಿಲ್ಲ. ಸದ್ಯ ಚುನಾವಣೆಯ ಪ್ರಚಾರದಲ್ಲಿ ಡಿಕೆಶಿ ನಿರತರಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿದ್ದಾರೆ. ಆದಕ್ಕಾಗಿ ಪ್ರಜಾಧ್ವನಿ ಯಾತ್ರೆಯ ಮೂಲಕ ಜಿಲ್ಲೆಜಿಲ್ಲೆಗಳಿಗೂ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆಯೇ ಇಡಿ ನೋಟೀಸ್ ಜಾರಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, ನಿನ್ನೆ ನನ್ನ ಮಗಳಿಗೆ ಕಾಲೇಜಿಗೆ ನೋಟೀಸ್ ಬಂದಿದೆ. ಎಷ್ಟು ಫೀಸ್ ಕಟ್ಟಿದ್ದೀರಾ, ಎಕ್ಸಾಂ ಪಾಸ್ ಮಾಡಿದ್ದೀರಾ ಅಂತ ಕೇಳಿದ್ದಾರೆ. ಸ್ಕೂಲ್ ಫೀಸ್ ಕೇಳ್ತಾರೆ ಅಂದ್ರೆ ಇನ್ನು ಏನೇನು ಕೇಳ್ತಾರೆ ಅಂತ ನೋಡಿ. 26 ಕ್ಕೆ ಬಂದು ಹಾಜರಾಗಬೇಕು ಎಂದು ಹೇಳಿದ್ದಾರೆ ಅಂತ ಡಿಕೆಶಿ ತಿಳಿಸಿದ್ದಾರೆ.
ಇನ್ನು ಡಿಕೆಶಿಗೆ ಸಂಬಂಧಿಸಿದಂತೆ ವಿಚಾರಣೆಯಲ್ಲಿ ನಾನೊಬ್ಬ ಕೃಷಿಕ, ನಾನು ಕೃಷಿಯ ಮೂಲಕವೇ ಆಸ್ತಿ ಸಂಪಾದನೆ ಮಾಡಿದ್ದು, ನಮಗೆ ಆದಾಯ ಮೂಲವೇ ಅದು. ನಮಗೆ ಊರಲ್ಲಿ ತೋಟ ಇದೆ ಅಂತ ಹೇಳಿದ್ದರು. ಅದೇ ಆದಾಯ ಮೂಲವಾ..? ಇಷ್ಟೆಲ್ಲಾ ಸಂಪಾದನೆ ಮಾಡಿದ್ದು ಅದರ ಮೂಲಕವೇನಾ ಎಂಬುದಮ್ನು ಈಗ ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.