Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

1ನೇ ಕ್ಲಾಸಿಗೆ ಲಕ್ಷ ಲಕ್ಷ ಹಣ ತೆಗೆದುಕೊಳ್ಳುವ ಬೆಂಗಳೂರಿನಲ್ಲಿರುವ ಧೋನಿ ಶಾಲೆಗೆ ನೋಟೀಸ್..!

---Advertisement---

ಬೆಂಗಳೂರು: ಇತ್ತಿಚೆಗೆ ಎಲ್ ಕೆಜಿ/ ಯುಕೆಜಿ ಮಾಡಿಸುವುದಕ್ಕೂ ಲಕ್ಷ ಲಕ್ಷ ಹಣ ಕಟ್ಟಬೇಕಾದ ಸ್ಥಿತಿ ಇದೆ. ಅದರಲ್ಲೂ ಸಿಬಿಎಸ್ಸಿ / ಸ್ಟೇಟ್ ಸಿಲಬಸ್ ಎಂಬ ಕಾಂಪಿಟೇಷನ್ ಇದೆ. ಸ್ಟೇಟ್ ಸಿಲಬಸ್ ಗಿಂತ ಸಿಬಿಎಸ್ಸಿ ಸಿಲಬಸ್ ಗೆ ಹೆಚ್ಚು ಒತ್ತು ಕೊಡುತ್ತಾರೆ. ಹೀಗಾಗಿಯೇ ಅದೆಷ್ಟೋ ಶಾಲೆಗಳಲ್ಲಿ ಸಿಬಿಎಸ್ಸಿ ಅಂತ ಹೇಳಿ, ಸ್ಟೇಟ್ ಸಿಲಬಸ್ ನೇ ಬೋಧನೆ ‌ಮಾಡುತ್ತಿರುವ ಘಟನೆಗಳು ನಡೆದಿವೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಒಡೆತನದ ಶಾಲೆಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಒಂದನೇ ತರಗತಿಗೇನೆ ಎಂಎಸ್ ಧೋನಿ ಒಡೆತನದ ಶಾಲೆಯಲ್ಲಿ ಲಕ್ಷ ಲಕ್ಷ ಹಣ ತೆಗೆದುಕೊಳ್ಳಲಾಗುತ್ತದೆ. ಆದ್ರೆ ಸಿಎಬಿಎಸ್ಸಿ ಅಂತ ಹೇಳಿ ಸ್ಟೇಟ್ ಸಿಲಬಸ್ ಮಾತ್ರ ಅನುಮತಿ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಸಿಂಗಸಂಧ್ರದಲ್ಲಿ ಧೋನಿ ಒಡೆತನದ ಶಾಲೆ ಆರಂಭವಾಗಿದೆ. ಇಲ್ಲಿ ಒಂದರಿಂದ ಎಂಟನೇ ತರಗತಿಯವರೆಗೂ ಶಾಲೆ ಇದೆ. ಈ ಧೋನಿ ಶಾಲೆಯಲ್ಲಿ ಒಂದನೇ ತರಗತಿಗೇನೆ 1 ಲಕ್ಷದ 47 ಸಾವಿರದಷ್ಟು ಫೀಸ್ ಇದೆ. ಇನ್ನು ಮುಂದಿನ ತರಗತಿಗಳಿಗೆ ಇನ್ನು ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಆದರೆ ಎಂಎಸ್ ಧೋನಿ ಗ್ಲೋಬಲ್ ಶಾಲೆ ಪೋಷಕರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ಈ ಶಾಲೆಯಲ್ಲಿ ಸಿಬಿಎಸ್ಸಿ ಸಿಲಬಸ್ ಎಂದು ಹೇಳಿ ಪೋಷಕರಿಂದ ಅಡ್ಮಿಷನ್ ಮಾಡಿಸಿಕೊಳ್ಳಲಾಗಿದೆ. ಆದರೆ CBSC ಸಿಲಬಸ್ ಗೆ ಶಾಲೆಯಿಂದ ಅನುಮತಿ ಪಡೆದಿಲ್ಲ. ಕೇವಲ ಸ್ಟೇಟ್ ಸಿಲಬಸ್ ಗೆ ಮಾತ್ರ ಅನುಮತಿ ಪಡೆದಿದೆ. ಹೀಗಾಗಿ ಶಿಕ್ಷಣ ಇಲಾಖೆ ಧೋನಿ ಗ್ಲೋಬಲ್ ಶಾಲೆಗೆ ನೋಟೀಸ್ ಜಾರಿ ಮಾಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...