ಕಾಂತಾರ ಸಿನಿಮಾದ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದ್ರೆ ರಿಲೀಸ್ ಆದಾಗಿನಿಂದಾನು ಹಾಡುಗಳ ಬಗ್ಗೆ ಕಾಪಿಡ್ ಎಂಬ ಗುಲ್ಲೆದ್ದಿದೆ. ಅದನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಳ್ಳಿಹಾಕಿಕೊಂಡೆ ಬಂದಿದ್ದಾರೆ. ವರಾಹ ರೂಪಂ ಹಾಗೂ ನವರಸಂ ಕೂಡ ಸಾಮ್ಯತೆ ಇರಬಹುದು. ಆದ್ರೆ ಇದು ಅದಲ್ಲ ಎಂದೇ ಹೇಳಿದ್ದಾರೆ.

ಕನ್ನಡದಲ್ಲಿ ರಿಲೀಸ್ ಆದಾಗ ಹಾಡಿನ ಕಾಪಿ ರೈಟ್ಸ್ ಮೇಲೆ ಯಾವ ಕೇಸ್ ಕೂಡ ದಾಖಲಾಗಿರಲಿಲ್ಲ. ಆದ್ರೆ ಮಲಯಾಳಂ ವರ್ಷನ್ ಕಾಂತಾರ ರಿಲೀಸ್ ಆದ್ಮೇಲೆ ತೈಕುಡಂ ಬ್ರಿಡ್ಜ್ ಸಂಸ್ಥೆ ಕೇಸ್ ಹಾಕಿತ್ತು. ಬಳಿಕ ಕೋರ್ಟ್ ಕೂಡ ತೈಕುಡಂ ಬ್ರಿಡ್ಜ್ ಸಂಸ್ಥೆಯ ಅನುಮತಿ ಪಡೆಯದೆ ಈ ಹಾಡು ಬಳಕೆ ಮಾಡಬಾರದು ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ಮಾತೃಭೂಮಿ ಎಂಬ ಸಂಸ್ಥೆಯೂ ದೂರು ದಾಖಲಿಸಿದೆ.

ಪಾಲಕ್ಕಾಡ್ ಸ್ಥಳೀಯ ನ್ಯಾಯಾಲಯಕ್ಕೆ ಮಾತೃಭೂಮಿ ಕಪ್ಪ ಟಿವಿ ಕಾಪಿರೈಟ್ಸ್ ದೂರು ನೀಡಿದ್ದು, ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ, ಚಿತ್ರಮಂದಿರದಲ್ಲಿಯೇ ಆಗಲಿ ಅಥವಾ ಯಾವುದೇ ಅಪ್ಲಿಕೇಷನ್ ನಲ್ಲಿ ಆಗಲಿ ವರಾಹ ರೂಪಂ ಹಾಡು ಪ್ರಸಾರವಾಗುವಂತಿಲ್ಲ ಎಂದು ತಿಳಿಸಿದೆ.
ಈ ಸಂಬಂಧ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕೇರಳದ ವಿತರಕ ಪೃಥ್ವಿರಾಜ್ ಸುಕುಮಾರನ್ ಹಾಗೂ ಹಾಡುಗಳು ಪ್ರಸಾವಾಗುತ್ತಿರುವ ವಿವಿಧ ಅಪ್ಲಿಕೇನ್ ಗಳಿಗೆ ನೋಟಿಸ್ ನೀಡಲು ಕೋರ್ಟ್ ಆದೇಶ ಹೊರಡಿಸಿದೆ.

