ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಜಿಲ್ಲೆಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವುದು ಅವಶ್ಯಕತೆಯೇ ಇಲ್ಲ. ದೇಶದ ಜನರೇ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಲ್ಲಿ ಏನೋ ಡಿಕೆ ಶಿವಕುಮಾರ್ ಅವರು ಅವರನ್ನು ಅವರು ವೈಭವೀಕರಿಸಿಕೊಳ್ಳಬಹುದು. ಆದರೆ ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಅವರೇ ಚುನಾವಣೆಗೆ ನೇತೃತ್ವ ವಹಿಸಿದ್ದರು. ಏನಾಯ್ತು ಅಲ್ಲಿ. 387 ಕ್ಷೇತ್ರದಲ್ಲಿ ಕಾಂಗ್ರೆಸ್ ಡೆಪಾಸಿಟ್ ಹೋಯ್ತು. ಗೆದ್ದಿದ್ದು ಎರಡೇ ಕ್ಷೇತ್ರ. ದೇಶದ ಜನರೇ ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ಅವರೇ ಅಧಿಕಾರದಲ್ಲಿದ್ದಂತ ಪಂಜಾಬ್ ನಲ್ಲಿ ಹೀನಾಯವಾಗಿ ಸೋತರು. ಆಮ್ ಆದ್ಮಿ ಪಾರ್ಟಿಗೆ ರೆಡ್ ಕಾರ್ಪೆಟ್ ಹಾಸಿ ಕರೆದುಕೊಂಡು ಬಂದು ಕೂರಿಸಿದವರು ಇದೇ ಕಾಂಗ್ರೆಸ್ ಕೆಟ್ಟ ಆಡಳಿತಗಾರರು.
ನಾನು ಡಿಕೆ ಶಿವಕುಮಾರ್ ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಹೋಗಲ್ಲ. ಆದರೆ ಅವರ ರಾಜಕೀಯ ಸಾಮರ್ಥ್ಯ, ಅವರು ಇದುವರೆಗೆ ಸಾಬೀತು ಪಡಿಸಿರುವುದು, ಕನಕಪುರದಲ್ಲಿ ಮಾತ್ರ. ಹೀಗಾಗಿ ಅವರನ್ನು ನಾವೂ ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ಒಂದು ಗಾದೆ ಮಾತಿದೆ ಉಪ್ಪು ತಿಂದವರು ನೀರು ಕುಡಿಯಬೇಕು, ತಪರಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಅವರು ಏನು ತಪ್ಪು ಮಾಡದೆ ಇದ್ದರೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.