ಮೈಸೂರು: ಕಾಂಗ್ರೆಸ್ ನಲ್ಲಿಗ ಟ್ವೀಟ್ ವಾರ್ ಶುರುವಾಗಿದೆ. ಎಂಬಿ ಪಾಟಿಲ್ ಮತ್ತು ಅಶ್ವತ್ಥ್ ನಾರಾಯಣ್ ಭೇಟಿಯಿಂದ ಶುರುವಾದ ವಿಚಾರ ಈಗ ನಲಪಾಡ್ ಮತ್ತು ರಮ್ಯಾ ನಡುವೆ ಬೆಂಕಿ ಹೊತ್ತಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಮಾತನಾಡಿದ್ರು, ಪಕ್ಷದ ಅಧ್ಯಕ್ಷರ ವಿರುದ್ಧ ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಧ್ರುವ ನಾರಾಯಣ್, ಈ ಟ್ವೀಟ್ ಸಂಬಂಧ ರಮ್ಯಾ ಅವರನ್ನು ಕರೆದು ವಿವರಣೆ ಕೇಳುತ್ತೀವಿ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ ಚೌಕಟ್ಟಿನೊಳಗೆ ಕರೆದು ಬಗೆಹರಿಸಿಕೊಳ್ಳಬೇಕು. ರಮ್ಯಾ ಅಶಿಸ್ತು, ಉದ್ಧಟತನ ತೋರಿದ್ದಾರೆ. ನಲಪಾಡ್ ಆಗಲಿ, ನಾನಾಗಲಿ ಯಾರೇ ಪಕ್ಷದ ವಿರುದ್ಧ ನಡೆದರೆ ಅದು ಅಶಿಸ್ತು. ಸಂಸದರಾದವರು ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡಬಾರದಿತ್ತು ಎಂದಿದ್ದಾರೆ.
ರಮ್ಯಾ ಟ್ವೀಟಾಸ್ರ್ತಕ್ಕೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ ಜೆ ಶಿವಕುಮಾರ್ ಕೂಡ ಸುದ್ದಿಗೋಷ್ಟಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ನಲಪಾಡ್ ಯಾವುದೋ ಖುರ್ಚಿಗೆ ಟವೆಲ್ ಹಾಕುವ ಉದ್ದೇಶದಿಂದ ಈಗ ಬಂದಿರಬೇಕು ಎಂದಿದ್ದರು. ಅದಕ್ಕೆ ರಮ್ಯಾ ಕೂಡ ವಾಗ್ದಾಳಿ ನಡೆಸಿ, ಬೇಲ್ ಮೇಲೆ ಹೊರಗಿರುವವರಿಂದ ನಾನು ಕಲಿಯುವ ಅವಶ್ಯಕತೆ ಏನಿಲ್ಲ ಎಂದಿದ್ದರು.