ಬಳ್ಳಾರಿ: ಮಗಳ ಹೆರಿಗೆಗೆಂದು ಕೋರ್ಟ್ ಅನುಮತಿ ಪಡೆದು ಬಳ್ಳಾರಿಯಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ, ಬಳ್ಳಾರಿ ಬಗೆಗಿನ ಕನಸೊಂದನ್ನು ಹೇಳಿಕೊಂಡಿದ್ದಾರೆ. ಬಳ್ಳಾರಿ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುವ ಕನಸಿತ್ತು ಎಂದು ಹೇಳಿಕೊಂಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆ. ಆದರೆ ಭಗವಂತ ನನಗೆ 12 ವರ್ಷ ವನವಾಸ ಕೊಟ್ಟುಬಿಟ್ಟು. ಈಗ ವನವಾಸ ಮುಗಿಯುವ ಕಾಲ ಬಂದಿದೆ. ಯಾರು ಕೂಡ ಬೆಂಗಳೂರು, ಮೈಸೂರಿಗೆ ಹೋಗಿ ಕೆಲಸ ಮಾಡಬಾರದು. ಸ್ಥಳೀಯವಾಗಿ ಅಭಿವೃದ್ಧಿಯಾಗಬೇಕು. ಇದು ನನ್ನ ಕನಸು. ಸಾರ್ವಜನಿಕ ಜೀವನದಲ್ಲಿದ್ದುಕೊಂಡೆ ನನ್ನ ಕನಸು ನನಸು ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಇನ್ನು ಕುರಗೋಡು ಬಗ್ಗೆ ಮಾತನಾಡಿದ ರೆಡ್ಡಿ, ಕರ್ನಾಟಕದಲ್ಲಿರೋದಕ್ಕೆ ಪುಣ್ಯ ಮಾಡಿರಬೇಕು. ಕುರಗೋಡುವಿನಲ್ಲಿ ದೇವರ ಎದುರು ನಿಂತರೆ ಬೇರೆ ಏನು ಬೇಕು ಎನಿಸಲ್ಲ. ಇಲ್ಲಿಯೇ ಒಂದು ಹೊಟೇಲ್ ಹಾಕಿಕೊಂಡು ಕೂತುಬಿಟ್ಟರೆ ಸಾಕು ಎನಿಸಿಬಿಡುತ್ತದೆ ಎಂದಿದ್ದಾರೆ.