ವಿಜಯೇಂದ್ರ ಥರ ಹಲ್ಕಾ ಸಿಡಿ ಇಡಲ್ಲ.. ವಿಜಯೇಂದ್ರ ನಾಗರಹಾವು : ಯತ್ನಾಳ್ ಆಕ್ರೋಶ

1 Min Read

 

ವಿಜಯಪುರ: ಮೂಡಾ ಹಗರಣ ವಿರೋಧಿಸಿ ಬಿಜೆಪಿ ನಾಯಕರು ಇಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿಲ್ಲ. ಇದೇ ಸಂದರ್ಭದಲ್ಲಿ ಎಂದಿನಂತೆ ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಎಲ್ಲರು ಹೋರಾಟ ಮಾಡೋರೆ. ಯಡಿಯೂರಪ್ಪ ಮಾಡಿದ್ರೂ ಮಾಡೋರೆ, ವಿಜಯೇಂದ್ರ ಮಾಡಿರು ಮಾಡೋರೆ, ಅಶೋಕ ಮಾಡಿದ್ರು ಮಾಡೋರೆ. ನೀವೆಲ್ಲಾ ವಿಧಾನಸಭೆಗೆ ಹೋಗಿ ಅಡ್ಜೆಸ್ಟ್ಮೆಂಟ್ ಮಾಡಿಕೊಳ್ತೀರಿ. ನಮ್ಮ‌ ಮುಂದೆ‌ ಮಾತ್ರ ಸುಮ್ನೆ ಇರ್ತೀರ. ನೀವೇ ಡೈರೆಕ್ಷನ್ ಕೊಡ್ತೀರಿ. ಸರ್ ನೀವೆಲ್ಲ ಬಿಲ್ ಗಳನ್ನ ಪಾಸ್ ಮಾಡಿಕೊಳ್ಳಿ. ನಾವೂ ಧರಣಿ ಕೂರುತ್ತೀವಿ. ಅಡ್ಜರ್ನ್ ಮಾಡಿ ಹೀಗೆ ನೀವೂ ಕೊಡುವ ಡೈರೆಕ್ಷನ್.

ಇವತ್ತು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಆಗ್ತಾ ಇದೆ. ಸುಮ್ಮ ಸುಮ್ಮನೆ ಕೇಸ್ ಹಾಕುತ್ತಾ ಇದ್ದಾರೆ. ಇವತ್ತು ಬಿಜೆಪಿ ಕಾರ್ಯಕರ್ತರು ಹೊರ ಬರುವ ಪರಿಸ್ಥಿತಿ ಇಲ್ಲ. ನೀವ್ ನೋಡುದ್ರೆ ಅಲ್ಲಿ ಹಲ್ಲು ಬಿಡುತ್ತಾ ನಿಲ್ತೀರಿ. ನಾನು ಸಿದ್ದರಾಮಯ್ಯ ಅವರ ಮುಖವನ್ನ ಬರೀ ವಿಧಾನಸೌಧದಲ್ಲಷ್ಟೇ ನೋಡಿದ್ದೀನಿ. ರಾತ್ರಿ ಡಿಕೆಶಿ ಮನೆಗೆ ಹೋಗಿ ಪಾರ್ಟಿ ಮಾಡಿ, ಎಲ್ಲಿ ಏನು ಸ್ಟೇಟ್ಮೆಂಟ್ ಕೊಡಬೇಕು ಎಂಬ ಸೆಟಲ್ಮೆಂಟ್ ಇರುತ್ತೆ. ವಿಜಯೇಂದ್ರನ ಹಾಗೇ ನಾನು ಹಲ್ಕಾ ಸಿಡಿಗಳನ್ನ ಇಡುವುದಿಲ್ಲ. ಇವರು ಸಹಿ ಮಾಡಿಸಿಕೊಂಡಿದ್ದು ಎಲ್ಲಾ ಫೋಟೋ, ವಿಡಿಯೋ ತೆಗೆದಿಟ್ಟೀನಿ ನಾನು.

ಈಗ ಅದೇ ನಾಗರಹಾವು.. ವಿಜಯೇಂದ್ರ, ಸಿದ್ದರಾಮಯ್ಯ ಅವರಿಗೆ ಕಿವಿ ಮಾತನ್ನ ಹೇಳೋದು ಏನು ಅಂದ್ರೆ, ನೀವು ಮಾಡಿರುವ ಉಪಕಾರವನ್ನ ವಿಜಯೇಂದ್ರ ಸರಿಯಾಗಿ ತೀರಿಸಿದ್ದಾನೆ. ಅದಕ್ಕೆ ನಿಮಗೇನಾದರೂ ಧಮ್, ತಾಕತ್ ಇದ್ರೆ ನೀವೂ ವಿಜಯೇಂದ್ರನ್ನ ತನಿಖೆ ಮಾಡಿಸಿ. ಇವನ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡಿತಿದೆ. ವಿಜಯೇಂದ್ರ ನೇತೃತ್ವದಲ್ಲಿ ಹೋಗುವುದಕ್ಕೆ ನಾವೂ ತಯಾರಿಲ್ಲ. ಹೈಕಮಾಂಡ್ ವಿಜಯೇಂದ್ರನನ್ನ ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *