ನವದೆಹಲಿ: ದೇಶದ ಪ್ರತೊಯಿಬ್ಬ ಪ್ರಜೆಯೂ 18 ವರ್ಷ ತುಂಬಿದ ಬಳಿಕ ಮತದಾನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದಿತ್ತು. ಆದರೆ ಇದೀಗ ಹದಿನೇಳು ವರ್ಷ ತುಂಬಿದ ಬಳಿಕವೂ ಮತದಾನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಯುವ ಮತದಾರರು ಜನವರಿ ಒಂದಕ್ಕೆ ಹದಿನೆಂಟು ವರ್ಷ ತುಂಬುವ ತನಕ ಕಾಯಬೇಕಾಗಿಲ್ಲ. ಹದಿನೇಳು ವರ್ಷ ತುಂಬಿದ ಬಳಿಕ ಮತದಾನ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಸಿಇಓ, ಇಆರ್ಓ, ಎಇಆರ್ಓ ಗಳಿಗೆ ಚುನಾವಣಾಧಿಕಾರಿ ಮಾಹಿತಿ ನೀಡಲು ಸೂಚಿಸಿದ್ದಾರೆ. ಜಿಲ್ಲೆಗಳಲ್ಲಿ ಮತದಾನ ಚೀಟಿಗೆ ಅರ್ಜಿ ಸಲ್ಲಿಸುವ ತಂತ್ರಜ್ಞಾನದ ಬಗ್ಗೆ ತಿಳಿಯಲು ಸೂಚಿಸಿದ್ದಾರೆ.
2023ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಡೋಬರ್ 1ರಂದು ಮುಂಗಡ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಹದಿನೇಳು ವರ್ಷ ಮೇಲ್ಪಟ್ಟವರು ಕೂಡ ಮತದಾನ ಗುರುತಿನ ಚೀಟಿಗೆ ಅರ್ಜಿ ಹಾಕಲು ಸೂಚಿಸಿದೆ.