ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಿ : ಡಿಸಿ ಅನಿರುದ್ಧ್ ಶ್ರವಣ್

suddionenews
2 Min Read

ಹೊಸಪೇಟೆ(ವಿಜಯನಗರ),(ಮೇ18):ವಿಜಯನಗರ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ(ಜೀವ ಮಾಪಕ ಮರು ಧೃಡೀಕರಣ) ಸಂಗ್ರಹಿಸಲಾಗುತ್ತಿದ್ದು, ಇದುವರೆಗೆ ನಾನಾ ಕಾರಣಗಳಿಂದ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಪಡಿತರ ಚೀಟಿದಾರರ ಬಗ್ಗೆ ಕೈಬಿಟ್ಟು ಹೋಗಿದ್ದ ಮಾಹಿತಿಗಳನ್ನು ಉನ್ನತೀಕರಣ ಮಾಡಲು ಸರ್ಕಾರವು ಇ-ಕೆವೈಸಿ (ಜೀವ ಮಾಪಕ ಮತ್ತು ದೃಢೀಕರಣ) ಕಾರ್ಯಕ್ರಮಕ್ಕೆ ಸರ್ಕಾರವು ಅವಕಾಶ ಕಲ್ಪಿಸಿಕೊಟ್ಟಿದೆ.ಸರ್ಕಾರದ ಆದೇಶದಂತೆ ಇ-ಕೆವೈಸಿ (ಜೀವ ಮಾಪಕ ಮತ್ತು ಧೃಡೀಕರಣ ಪ್ರಕ್ರಿಯೆಯನ್ನು ಪುನರಾರಂಭಿಸಲಾಗಿದ್ದು, ಅಂತ್ಯೋದಯ (ಎ.ಎ.ವೈ.), ಅಧ್ಯತಾ (ಪಿ.ಹೆಚ್.ಹೆಚ್)ಹಾಗೂ ಆದ್ಯತೇತರಾ (ಎನ್.ಪಿ.ಹೆಚ್.ಹೆಚ್) ಪಡಿತರ ಚೀಟಿಗಳಲ್ಲಿ ಈ ಹಿಂದೆ ಇ-ಕೆವೈಸಿ ಮಾಡಿಸಿರದ ಅಥವಾ ಬೆರಳಚ್ಚು ನೀಡಿದ ಸದಸ್ಯಸರುಗಳು ಅಂದರೆ ಉದ್ಯೋಗದ ವಿಧ್ಯಾಭ್ಯಾಸದ ಸಲುವಾಗಿ ಹಾಗೂ ಜೀವನೋಪಾಯ ಸಂಬಂಧ ಇತರೆ ಕಾರಣಗಳಿಂದಾಗಿ ಹೊರಗಿನ ಪ್ರದೇಶದಲ್ಲಿ ನೆಲೆಸಿರುವ ಪಡಿತರ ಚೀಟಿ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸುವಂತೆ ಡಿಸಿ ಅನಿರುದ್ಧ್ ಶ್ರವಣ್ ಅವರು ತಿಳಿಸಿದ್ದಾರೆ.

ಇ-ಕೆವೈಸಿ ಮಾಡಿಸಲು ತಪ್ಪಿದಲ್ಲಿ ಪಡಿತರ ಚೀಟಿಯನ್ನು ಸ್ಥಗಿತಗೊಳಿಸಲಾಗುವುದೆಂದು ತಿಳಿಸಿರುವ ಅವರು , ಪ್ರಸ್ತುತ ಇ-ಕೆವೈಸಿ (ಜೀವ ಮಾಪಕ ಮರು ಧೃಢೀಕರಣ) ಪ್ರಕ್ರಿಯೆಗೆ ಯಾವುದೇ ಶುಲ್ಕ ಇರುವುದಿಲ್ಲ.ಪಡಿತರ ಚೀಟಿದಾರರು ಯಾವುದೇ ಹಣ ನೀಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದುವರೆಗೂ ಇ-ಕೆವೈಸಿ ಮಾಡಿಸಿದ ಪಡಿತರ ಚೀಟಿಯ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚು ನೀಡಿ ಸರ್ಕಾರದ ಇ-ಕೆವೈಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಯಾದ್ಯಂತ ಕುಟುಂಬ ಪಡಿತರ ಚೀಟಿಗಳನ್ನು ಕೋರಿ ಪ್ರಸ್ತುತ 15426 ಅರ್ಜಿಗಳು ಸ್ವೀಕೃತಗೊಂಡಿದ್ದು ಈ ಪೈಕಿ 6835 ಆರ್ಜಿಗಳನ್ನು ವಿಲೇಗೊಳಿಸಲಾಗಿರುತ್ತದೆ ಹಾಗೂ 8591 ಅರ್ಜಿಗಳ ವಿಲೇವಾರಿಯು ಪ್ರಗತಿಯಲ್ಲಿದ್ದು ಸದರಿ ಅರ್ಜಿಗಳನ್ನು ಜಿಲ್ಲೆಯ ಎಲ್ಲಾ ಆಹಾರ ಶಿರಸ್ತೇದಾರರು/ಆಹಾರ ನಿರೀಕ್ಷಕರುಗಳಿಗೆ ಆಧ್ಯತೆ ಮೇರೆಗೆ ಪರಿಶೀಲಿಸಿ ಅರ್ಹ ಪಡಿತರ ಚೀಟಿ ವಿತರಿಸುವ ಮೂಲಕ ವಿಲೇಗೊಳಿಸುವಂತೆ ನಿರ್ದೇಶೀಸಲಾಗಿದೆ. ಈ ಪೈಕಿ ಯಾವುದೇ ಗೊಂದಲಗಳು ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ 08394-295655ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ತಮ್ಮ ಸಮಸ್ಯೆ ಅಥವಾ ಮಾಹಿತಿ ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಹಶೀಲ್ದಾರರು/ಆಹಾರ ಶಿರಸ್ತೇದಾರರು/ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು.

Share This Article
Leave a Comment

Leave a Reply

Your email address will not be published. Required fields are marked *