ಶಿವಮೊಗ್ಗ: ಯಾವುದೇ ಆದೇಶ ಕಾಪಿ ಇಲ್ಲದೆ ಕಾಮಗಾರಿ ಮಾಡಿಸಿ, ಹಣ ಬಿಡುಗಡೆಗೆ 40% ಕಮಿಷನ್ ಕೇಳುತ್ತಿದ್ದಾರೆ ಅಂತ ಮಾಜಿ ಸಚಿವ ಈಶ್ವರಪ್ಪ ಮೇಲೆ ಆರೋ ಮಾಡಿ ಗುತ್ತಿಗೆದಾರ ಸಂತೋಷ್ ಸಾವನ್ನಪ್ಪಿದ್ದಾರೆ. ದಾಖಲೆ ಇಲ್ಲದ ಕಾಮಗಾರಿ ಬಗ್ಗೆ ಸಿಎಂ ಬೊಮ್ಮಾಯಿ ಅವರು ಮಾತನಾಡಿದ್ದು, ಇನ್ಮುಂದೆ ಮೌಖಿಕ ಆದೇಶದ ಮೇಲೆ ಕಾಮಗಾರಿ ಮಾಡುವಂತಿಲ್ಲ ಎಂದಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಖಂಡಿತವಾಗಿಯೂ ಲೋಕಲ್ ಬಾಂಡೀಸ್ ನಲ್ಲಿ, ಪಂಚಾಯತ್ ರಾಜ್ ಬಾಂಡೀಸ್ ನಲ್ಲೂ ಮೌಖಿಕ ಆದೇಶದ ಮೇಲೆ ಕೆಲಸಗಳು ನಡೆಯುತ್ತವೆ. ನಾನು ಪ್ರತಿ ಡಿಪಾರ್ಟ್ಮೆಂಟ್ ಗೆ ಸೂಚನೆಯನ್ನು ಕೊಟ್ಟಿದ್ದೇನೆ. ಯಾವುದೇ ಮೌಖಿಕ ಆದೇಶದ ಮೇಲೆ ಕೆಲಸದ ಕಾಮಗಾರಿಯನ್ನು ಮಾಡಬಾರದು. ಯಾರಾದ್ರೂ ಮಾಡಿದರೆ ಆ ಪ್ರಕ್ರಿಯೆಯನ್ನು ಇಂಜಿನಿಯರ್ ಅವರು ಅದರ ಜವಬ್ದಾರಿಯಾಗುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಪಿಡಿಒ ಮತ್ತು ಇಓ ಜವವ್ದಾರಿಯಾಗುತ್ತಾರೆ. ಸ್ಪಷ್ಟವಾದ ರೈಟಿಂಗ್ ನಲ್ಲಿಯೇ ಆದೇಶ ನೀಡಬೇಕಾಗುತ್ತದೆ. ಮೊದಲು ಈಗ ಈ ಕಮಿಟಿ ಹೇಗೆ ವರ್ಕ್ ಆಗುತ್ತೆ ಎಂಬುದನ್ನು ನೋಡಬೇಕು. ಅವಶ್ಯಕತೆ ಬಿದ್ದರೆ ಜಿಲ್ಲಾ ಮಟ್ಟದಲ್ಲೂ ಈ ಯೋಜನೆ ತರೋಣಾ.
ಸಮಾಜದಲ್ಲಿ ಎಲ್ಲರ ಸಂಯಮ ಬಹಳ ಮುಖ್ಯ. ಯಾವುದೋ ಒಂದು ವಾಟ್ಸಾಪ್ ಬಂದ ಕೂಡಲೆ ಪ್ರತಿಕ್ರಿಯೆ ಮಾಡುವ ಅವಶ್ಯಕತೆ ಇರಲ್ಲ. ಯಾರು ಮಾಡಿದ್ದಾರೆ, ಏನು ಎಂಬುದನ್ನು ನೋಡಿ ದಂಡಿಸಬೇಕು, ಕಾನೂನು ಪ್ರಕಾರ ಶಿಕ್ಷಿಸಬೇಕು. ಅದೆಲ್ಲವನ್ನು ಮಾಡಲು ಪೊಲೀಸರಿದ್ದಾರೆ. 99% ಜನ ಹಾಗೆಲ್ಲ ಉದ್ರೇಕ ಆಗಿರಲ್ಲ. 5% ಜನ ಏನು ಇಲ್ಲದೆ ಉದ್ರೇಕ ಆಗಿರುವವರಿದ್ದಾರೆ. ಅವರುಗಳ ಬಗ್ಗೆ ಈಗಾಗಲೇ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.
ಸಾಕ್ಷಿ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಕ್ಷಿಯಲ್ಲಿ ಏನೆಲ್ಲಾ ಸಿಕ್ಕಿದೆ, ಯಾರೆಲ್ಲಾ ಸಿಕ್ಕಿದ್ದಾರೆ ಎಂಬುದು ತನಿಖೆ ನಡೆಯುತ್ತಿದೆ. ಅದರಲ್ಲಿ ಅವರ ಪಾತ್ರ ಇದ್ದರೆ ಖಂಡಿತ ಶಿಕ್ಷೆಯಾಗುತ್ತೆ ಎಂದಿದ್ದಾರೆ.