ನವದೆಹಲಿ: ಕೊರೊನಾದಿಂದ ಮುಕ್ತಿ ಪಡೆಯಬೇಕು ಅಂದ್ರೆ ಅದು ಲಸಿಕೆಯಿಂದ ಮಾತ್ರ ಸಾಧ್ಯ ಅನ್ನೋ ನಂಬಿಕೆಯಿಂದ ಎಲ್ಲಾ ಕಡೆ ಸರ್ಕಾರವೇ ಲಸಿಕೆಯನ್ನ ಕಡ್ಡಾಯಗೊಳಿಸಿದೆ. ಆದ್ರೂ ಕೆಲವರು ಲಸಿಕೆ ಹಾಕಿಸಿಕೊಳ್ಳುವ ಗೋಜಿಗೆ ಹೋಗ್ತಿಲ್ಲ. ಹೀಗಾಗಿ ಪಂಜಾಬ್ ಸರ್ಕಾರ ವ್ಯಾಕ್ಸಿನ್ ಹಾಕಿಸಿಕೊಂಡ ಸರ್ಟಿಫಿಕೇಟ್ ಅಪ್ಲೋಡ್ ಮಾಡದೆ ಇದ್ದರೆ ಸಂಬಳವೇ ಇಲ್ಲ ಎಂದು ಖಡಕ್ ಆಗಿ ನೌಕರರಿಗೆ ತಿಳಿಸಿದೆ.
ಪಂಜಾಬ್ ನಲ್ಲಿ ಸರ್ಕಾರಿ ನೌಕರರು ಒಂದು ಡೋಸ್ ಅಥವಾ ಎರಡು ಡೋಸ್ ಪಡೆದ ಸರ್ಟಿಫಿಕೇಟ್ ಅನ್ನು ಉದ್ಯೋಗ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು ಆಗ ಮಾತ್ರ ಅವರಿಗೆ ಸಂಬಳ ಸಿಗುತ್ತೆ. ಇಲ್ಲವಾದರೆ ಅಂಥ ನೌಕರರಿಗೆ ಸಂಬಳ ಕಟ್ ಆಗುತ್ತೆ ಎಂದು ತಿಳಿಸಿದ್ದಾರೆ.
ಒಂದು ಕಡೆ ಒಮಿಕ್ರಾನ್ ಭೀತಿ ಮತ್ತೊಂದು ಕಡೆ ಕೊರೊನಾ ಮೂರನೆ ಅಲೆಯ ಆತಂಕ. ದಿನೇ ದಿನೇ ಹೆಚ್ಚಾಗುತ್ತಿರುವ ಸೋಂಕಿನಿಂದಾಗಿ ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಯಾಕಂದ್ರೆ ಮೊದಲ ಹಾಗೂ ಎರಡನೇ ಅಲೆಯಲ್ಲಿ ಈ ಕೊರೊನಾದಿಂದಾಗಿ ಉಂಟಾದ ಸಾವು ನೋವು ಕಡಿಮೇ ಏನಲ್ಲ. ಹೀಗಾಗಿ ಮತ್ತೆ ಅಂಥದ್ದೇ ದಿನಗಳು ಇನ್ನೆಲ್ಲಿ ಮರುಕಳುಹಿಸುತ್ತವೋ ಎಂಬ ಆತಂಕ. ಹೀಗಾಗಿ ಸರ್ಕಾರಗಳು ತಮ್ಮ ರಾಜ್ಯದ ಜನರಿಗೆ ವ್ಯಾಕ್ಸಿನೇಷನ್ ಹಾಗೂ ಮಾಸ್ಕ್ ಕಡ್ಡಾಯಗೊಳಿಸಿವೆ.