ಚಿಕ್ಕಮಗಳೂರು: ಅದೆಷ್ಟೋ ಬಾರಿ ಸಾಬೀತಾಗಿದೆ. ಜನರು ಕೂಡ ಆಗಾಗ ಜನಪ್ರತಿನಿಧಿಗಳಿಗೆ ಶಾಪ ಹಾಕ್ತಾರೆ. ಚುನಾವಣೆ ಬಂದ್ರೆ ಮಾತ್ರ ಇವ್ರು ನಮ್ ಕಡೆ ತಲೆ ಹಾಕೋದು, ಅದು ಇದು ಅಭಿವೃದ್ಧಿ ಮಾಡೋ ಡ್ರಾಮಾ ಆಡೋದು ಅಂತ. ಆದ್ರೆ ಗ್ರಾಮದ ಜನ ಎಚ್ಚೆತ್ತುಕೊಂಡರೆ ಜನಪ್ರತಿನಿಧಿಗಳಿಗೆ ಚುರುಕು ಮುಟ್ಟಿಸೋದು ಕಷ್ಟವೇನಲ್ಲ. ಅಂಥದ್ದೊಂದು ಕೆಲಸವನ್ನ ಇದೀಗ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೇರಡಿಕೆ ಗ್ರಾಮದ ಜನ ಮಾಡಲು ಹೊರಟಿದ್ದಾರೆ.
ಹೌದು ಹೇರಡಿಕೆ ಗ್ರಾಮದಲ್ಲಿ ಸುಮಾರು 30 ವರ್ಷಗಳಿಂದ ಸರಿಯಾದ ರಸ್ತೆಯಿಲ್ಲ. ಇದು ಬರೀ ಒಂದು ಗ್ರಾಮದ ಸಮಸ್ಯೆಯಲ್ಲ. ಸುಮಾರು 8 ಗ್ರಾಮದ ಜನ ಸಂಪರ್ಕಿಸೋ ರಸ್ತೆ ಸ್ವಲ್ಪವೂ ಸರಿ ಇಲ್ಲ. ಸುಮಾರು 300 ಮನೆಗಳಲ್ಲಿ 700 ಜನ ಆದಿವಾಸಿಗಳು ವಾಸ ಮಾಡ್ತಾ ಇದ್ದಾರೆ.
ರಸ್ತೆ ಇರಲಿ ಸರಿಯಾದ ಮೂಲಭೂತ ಸೌಲಭ್ಯಗಳೇ ಇಲ್ಲಿ ಇಲ್ಲ. ಮೂವತ್ತು ವರ್ಷದಿಂದ ಇದೇ ಹಾಳಾದ ರಸ್ತೆ. ಎಷ್ಟೇ ಬಾರಿ ಕೇಳಿಕೊಂಡರು ಗ್ರಾಮಸ್ಥರ ಮನವಿಗೆ ಯಾವ ಸ್ಪಂದನೆಯೂ ಇಲ್ಲ. ಹೀಗಾಗಿ ಗ್ರಾಮದ ಜನ ಈ ಬಾರಿಯ ಚುನಾವಣೆಗೆ ವೋಟ್ ಕೇಳಲು ಬರುವವರಿಗೆ ಎಚ್ಚರಿಕೆಯನ್ನ ನೀಡುತ್ತಿದ್ದಾರೆ. ನೋ ರೋಡ್ ನೋ ವೋಟ್ ಎಂಬ ತತ್ವ ಪಾಲನೆ ಮಾಡ್ತಿದ್ದಾರೆ. ರಸ್ತೆ ಸರಿ ಮಾಡದೆ ಇದ್ರೆ ಇನ್ನು ಮೂವತ್ತು ವರ್ಷ ಹೋದರು ಮತದಾನ ಮಾಡಲ್ಲ ಎಂದು ಹಠ ಹಿಡಿದು ಕುಳಿತಿದ್ದಾರೆ.