ಯಾವ ಧರ್ಮ, ಜಾತಿಯಾದರೂ ಬಿಡುವುದಿಲ್ಲ : ಸಿಎಂ ಸಿದ್ದರಾಮಯ್ಯ

suddionenews
1 Min Read

ಹಾವೇರಿ: ಜಿಲ್ಲೆಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಸಿದ್ದರಾಮಯ್ಯ ಹಾವೇರಿಯ ಹಾನಗಲ್ ಗೆ ಭೇಟಿ ನೀಡಿದ್ದಾರೆ. ಸಂತ್ರಸ್ತೆಯ ಸಂಬಂಧಿಕರು ಸಿಎಂ ಸಿದ್ದರಾಮಯ್ಯ ಅವರ ಭೇಟಿ ಮಾಡಿ, ಪ್ರಕರಣದ ಸಂಬಂಧ ವಿಚಾರಗಳನ್ನು ಹೇಳಿದ್ದಾರೆ.

ಬೆಳಗಾವಿ ಪ್ರಕರಣ ಆದ ಕೂಡಲೇ ಅಲ್ಲಿಗೆ ಹೋಗಿ ನೋಡಿಕೊಂಡು ಬಂದ್ರಿ. ಆದರೆ ಇಲ್ಲಿ ಯಾಕೆ ಸರ್ ಇಷ್ಟೊಂದು ತಡವಾಗಿ ಬಂದಿದ್ದು ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಸಿದ್ದಾರೆ.‌ ಅಲ್ಲಿ ಗೃಹ ಸಚಿವರು ಇದ್ದರು. ಹೋಗಿ ನೋಡಿಕೊಂಡು ಬನ್ನಿ ಎಂದು ನಾನೇ ಕಳುಹಿಸಿದೆ. ಇಲ್ಲಿ ಹೋಂ ಮಿನಿಸ್ಟರ್ ಇರಲಿಲ್ಲ. ಮಾಜಿ ಸಚಿವ ಶಿವಣ್ಣ ಹೋಗಿ ಬಂದಿದ್ದಾರೆ ಅಲ್ಲಿಗೆ. ನಮ್ಮ ಶಿವಣ್ಣ ಅವರಿಗೆ ಜವಬ್ದಾರಿ ಇಲ್ವಾ. ಹೋಗಿ ಬರುವುದು, ಸಾಂತ್ವನ ಹೇಳುವುದು ಒಂದು ಭಾಗ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವುದು ಎರಡನೇ ಭಾಗ. ಶಿವಣ್ಣ ಅವರ ಬಳಿಯೂ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಯಾರೂ ಶಂಕಿತರಿದ್ದಾರೆ ಅವರನ್ನೆಲ್ಲಾ ಅರೆಸ್ಟ್ ಮಾಡಲಾಗಿದೆ. ತನಿಖೆ ನಡೆಯುತ್ತಿದೆ. ಯಾರನ್ನೂ ಕೂಡ ನಮ್ಮ ಸರ್ಕಾರದಲ್ಲಿ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಬಿಡುವುದಿಲ್ಲ. ಅವರು ಯಾವುದೇ ಧರ್ಮಕ್ಕೆ ಸೇರಿರಬಹುದು ಅಥವಾ ಜಾತಿಗೆ ಸೇರಿರಬಹುದು. ಕಾನೂನು ರೀತಿಯ ಕ್ರಮ ಜರುಗಿಸುವ ಕೆಲಸ ಮಾಡುತ್ತೇವೆ. ಮಾತನಾಡುದ್ರೆ ಮಾತ್ರ ಕ್ರಮನಾ..? ಮಾತನಾಡದೆ ಇದ್ದರೆ ಕ್ರಮ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವಾ..? ಈ ಕೇಸ್ ನಲ್ಲಿ ಯಾರೇ ಕಾನೂನು ಕೈಗೆತ್ತಿಕೊಂಡಿದ್ದರೆ ಖಂಡಿತ ಕ್ರಮ ಆಗುತ್ತೆ. ಈಗ ತಾನೇ ಅರ್ಜಿ ಕೊಟ್ಟಿದ್ದಾರೆ. ನಾನು ಅದನ್ನು ನೋಡುತ್ತೇನೆ. ಎಸ್ಐಟಿಯಲ್ಲಿ ಇರುವವರು ಪೊಲೀಸರೇ, ಈಗ ವಿಚಾರಣೆ ನಡೆಸುತ್ತಿರುವವರು ಪೊಲೀಸರೇ. ಮುಂದೇ ನೋಡೋಣಾ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *