ಕೆಲಸ ಮಾಡಿಲ್ಲ ಹಣ ಕೊಡುವ ಪ್ರಶ್ನೆಯಿಲ್ಲ : ಲಂಚ ಆರೋಪದ ಬಗ್ಗೆ ಈಶ್ವರಪ್ಪ ಸಮರ್ಥನೆ

 

ಬೆಂಗಳೂರು: ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಗುತ್ತಿಗೆದಾರರಿಂದ ಲಂಚ ಕೇಳಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಾಂಗ್ರೆಸ್ ಕೂಡ ಹೌಹಾರಿದೆ. ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದೀಗ ಗುತ್ತಿಗೆದಾರನಿಂದ ಲಂಚ ಕೇಳಿದ ಆರೋಪದ ಬಗ್ಗೆ ಸಚಿವ ಈಶ್ವರಪ್ಪ ಆ ಆರೋಪವನ್ನು ನಿರಾಕರಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ಸಂತೋಷ್ ಗೆ ಯಾವುದೇ ವರ್ಕ್ ಆರ್ಡರ್ ಮಂಜೂರಾಗಿಲ್ಲ. ಕೆಲಸ ಮಾಡದಿದ್ದಾಗ ಹಣ ಕೊಡುವ ಪ್ರಶ್ನೆಯೆ ಇಲ್ಲ ಅಲ್ವಾ ಎಂದಿದ್ದಾರೆ.

ಈ ಷಡ್ಯತ್ರದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನಾಳೆ ಸಂತೋಷ್ ಪಾಟೀಲ್ ಗೆ ನೋಟೀಸ್ ನೀಡುತ್ತಾರೆ. ಸಂತೋಷ್ ಆರೋಪಕ್ಕೂ, ನಮ್ಮ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ದೆಹಲಿಯಲ್ಲಿ‌ ಕಾಂಗ್ರೆಸ್ ಮಾಡಿದ ಆರೋಪಕ್ಕೂ ಯಾವುದೇ ಉರುಳಿಲ್ಲ. ಎಂದು ತಮ್ಮ ಮೇಲಿನ ಆರೋಪವನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!