ತುಮಕೂರು: ಗುಬ್ಬಿ ಶಾಸಕ ಶ್ರೀನಿವಾಸ್ ಗೌಡ ಮತ್ತೊಮ್ಮೆ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಜೆಡಿಎಸ್ ನಿಂದ ಉಚ್ಛಾಟಿತವಾದ ಮೇಲೆ ಕುಮಾರಸ್ವಾಮಿ ಮತ್ತು ಜೆಡಿಎಸ್ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೀಗ ನಗರದಲ್ಲಿ ಮಾಧ್ಯಮದವರೊಂದಿ ಮಾತನಾಡುತ್ತಾ, ಜೆಡಿಎಸ್ ಗೆ ಮತ್ತೆ ವಾಪಾಸ್ ಹೋಗುವುದಕ್ಕೆ ನಾನೇನು ಜಿಟಿ ದೇವೇಗೌಡ ಅಲ್ಲ ಎಂದಿದ್ದಾರೆ.
ನನ್ನ ಫೇಸ್ ಮಾಡುವ ಧೈರ್ಯ ಕುಮಾರಸ್ವಾಮಿ ಅವರಿಗೆ ಇಲ್ಲ. ಯಾವುದೇ ಕಾರಣಕ್ಕೂ ನಾನು ಜೆಡಿಎಸ್ ಗೆ ವಾಪಾಸ್ ಹೋಗುವುದಿಲ್ಲ. ಸಾರಾ ಮಹೇಶ್ ಮನೆಗೆ ಭೇಟಿ ನೀಡಿದ್ದು, ಸ್ನೇಹಪೂರ್ವಕವಾಗಿ. ಅನ್ನದಾನಿ, ಸಾರಾ ಮಹೇಶ್ ಸೇರಿದಂತೆ ಅಲ್ಲಿರುವ ಹಲವರಿಗೆ ನಾನು ಜೆಡಿಎಸ್ ನಲ್ಲಿಯೇ ಉಳಿಯಬೇಕು ಎಂಬುದು ಇದೆ. ಆದರೆ ಇದು ನಮ್ಮ ಲೀಡರ್ ಗೆ ಆಸೆ ಇಲ್ಲ. ನಮ್ಮ ಮನೆ ಬಳಿಯೂ ಬರುವುದಿಲ್ಲ. ನನ್ನನ್ನು ಫೇಸ್ ಮಾಡುವ ಧೈರ್ಯವೂ ಅವರಿಗೆ ಇಲ್ಲ.
ನಾನು ಇವತ್ತೊಂದು, ನಾಳೆ ಒಂದು ಮಾತನಾಡುವ ವ್ಯಕ್ತಿ ಅಲ್ಲ. ನನ್ನದೇ ಆದ ವ್ಯಕ್ತಿತ್ವ ಇಟ್ಟುಕೊಂಡಿರುವ ವ್ಯಕ್ತಿ. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಅದು ಮುಗಿದು ಹೋಗಿರುವ ವಿಚಾರ. ನಾನು ಜೆಡಿಎಸ್ ಗೆ ವಾಪಾಸ್ ಬರಲು ಜಿಟಿ ದೇವೇಗೌಡ ಅಥವಾ ಶಿವರಾಮೇಗೌಡ ಅಲ್ಲ.. ನಾನು ವಾಸಣ್ಣ. ನಾನು ನನ್ನ ಅಪ್ಪನ ಮಾತೇ ಕೇಳುವುದಿಲ್ಲ ಎಂದು ಹರಿಹಾಯ್ದಿದ್ದಾರೆ.