ಮಂಗಳೂರು: ತಣ್ಣಗಾಗಿದ್ದ ಹಿಜಾಬ್ ವಿವಾದ ಮತ್ತೆ ಮಂಗಳೂರಿನಲ್ಲಿ ಹೊಗೆಯಾಡಿದೆ. ಕಾಲೇಜಿಗೆ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುತ್ತಾರೆಂಬ ಆರೋಪವಿದೆ. ಈ ಬಗ್ಗೆ ವಿವಿ ಪ್ರಾಂಶುಪಾಲೆ ಅನುಸೂಯ ರೈ ಮಾತನಾಡಿ, ನಮ್ಮ ಕಾಲೇಜು ಯೂನಿಯನ್ ಚುನಾವಣೆ ಮಾರ್ಚ್ 10ಕ್ಕೆ ನಡೆದಿದೆ. ಚುನಾವಣೆ ಬಳಿಕ ಮಕ್ಕಳು ಮನವಿಯೊಂದನ್ನು ಕೊಟ್ಟಿದ್ದರು. ಏಪ್ರಿಲ್ ನಲ್ಲಿ ಪರೀಕ್ಷೆ ನಡೆದು ರಜೆ ಇತ್ತು. ಮೇ 12ಕ್ಕೆ ಕ್ಲಾಸಸ್ ಶುರುವಾಯ್ತು. ಅಗ ಸದ್ಯಕ್ಕೆ ಆನ್ಲೈನ್ ಕ್ಲಾಸ್ ಮಾಡಿದ್ದೆವು.
ಅದಕ್ಕೂ ಮುನ್ನ ನಮ್ಮ ಕಾಲೇಜಿನಿಂದ ಒಂದು ಆದೇಶ ನೀಡಿದ್ದೆವು. ಯಾರು ತಲೆಗೆ ಶಾಲು ಹಾಕಿಕೊಳ್ಳಬೇಕು ಅಂತಾರೋ ಅವರು ನಮ್ಮ ಶಾಲೆಯ ಯೂನಿಫಾರ್ಮ್ ನಲ್ಲಿಯೇ ಹಾಕಬೇಕು. ಇದು ಹೈಕೋರ್ಟ್ ತೀರ್ಮಾನ ಕೊಡುವ ಮುನ್ನ. ಆದರೆ ಇದನ್ನು ಒತ್ತಾಯ ಮಾಡಿರಲಿಲ್ಲ. ಬೇರೆ ಯಾವ ಕಲರ್ ಹಾಕಲು ಅನುಮತಿ ಇರಲಿಲ್ಲ. ನಮ್ಮ ಯೂನಿಫಾರ್ಮ್ ಮಾತ್ರ ಹಾಕಬೇಕು ಅಂತ ಹೇಳಿದ್ದೆವು. ನಮ್ಮ ಕಾಲೇಜಿನಲ್ಲಿ 1600 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿನಿಯರು ಶಿರವಸ್ತ್ರ, ಯೂನಿಫಾರ್ಮ್ ನಲ್ಲಿರುವ ಬಟ್ಟೆಯನ್ನೆ ಶಿರವಸ್ತ್ರ ಮಾಡಿಕೊಂಡಿದ್ದಾರೆ. ಈಗಲೂ ಹಾಕಿಕೊಂಡು ಬರುತ್ತಾರೆ. ಆದರೆ ಹೈಕೋರ್ಟ್ ಆದೇಶ ಬರವುದಕ್ಕೂ ಮುನ್ನ ನಾವೂ ಅದಕ್ಕೆ ಅನುಮತಿ ನೀಡಿದ್ದೆವು.
ನಮ್ಮ ಕಾಲೇಜು ಮಂಗಳೂರು ವಿವಿ ಆರ್ಡರ್ ಪ್ರಕಾರ ನಡೆದುಕೊಳ್ಳುತ್ತೆ. ಸದ್ಯದ ಸ್ಥಿತಿ ವಿವರಿಸಿದ್ದೇವೆ. ಅವರು ಹೇಳಿದ್ದಾರೆ ಈ ತಿಂಗಳಲ್ಲಿ ಮೀಟಿಂಗ್ ಮಾಡಿ ಸಿಂಡಿಕೇಟ್ ಬಳಿ ಚರ್ಚಿಸಿ, ಆ ನಂತರ ನಿರ್ಧಾರ ತಿಳಿಸುತ್ತೇವೆ ಎಂದಿದ್ದರು. ಮೀಟಿಂಗ್ ಬಳಿಕ ವಾಟ್ಸಾಪ್ ನಲ್ಲಿ ನಾಳೆಯಿಂದ ಆಫ್ಲೈನ್ ಕ್ಲಾಸ್ ಶುರುವಾಗುತ್ತೆ. ಯೂನಿಫಾರ್ಮ್ ಮಾತ್ರ ಧರಿಸಿ, ಶಿರವಸ್ತ್ರ ಧರಿಸುವಂಗಿಲ್ಲ ಎಂದು ಮಾಹಿತಿ ನೀಡಿದ್ದೆ. ಮರುದಿನ ಬೆಳಗ್ಗೆ ವಿದ್ಯಾರ್ಥಿಗಳು ಬಂದು ಶಾಲೆಯಲ್ಲಿ ಮಾತ್ರವಲ್ಲ ಕ್ಯಾಂಪಸ್ ನಲ್ಲೂ ಹಾಕಬಾರದು ಎಂದು ಮನವಿ ಮಾಡಿದ್ದಾರೆ. ಆ ಬಳಿಕ ಇದನ್ನು ವಿಭಾಗ ಮುಖ್ಯಸ್ಥರ ಸಭೆ ಕರೆದಿದ್ದೇನೆ. ಎಲ್ಲರ ಗಮನಕ್ಕೂ ತಂದು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.