ಬೆಂಗಳೂರು; ಪಹಲ್ಗಾನ್ ಗೆ ತೆರಳಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ ಸಚಿವ ಸಂತೋಷ್ ಲಾಡ್. ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿದ್ದು ಹೀಗೆ, ಅವ್ರೆಲ್ಲಾ ಶಾಕ್ ನಲ್ಲಿದ್ರು. ಪ್ರತಿಯೊಂದು ಗಾರ್ಡನ್ ನಲ್ಲೊ, ಹೊಟೇಲ್ ಗಳಲ್ಲಿ ಗನ್ ಹಿಡಿದುಕೊಂಡವರಿದ್ದರು. ಎಲ್ಲಿ ಏನಾಗುತ್ತೆ, ಯಾವಾಗ ಶೂಟೌಟ್ ಆಗುತ್ತೆ ಎಂಬ ಭಯ ಅವರನ್ನ ಕಾಡುತ್ತಾ ಇತ್ತು. ನಮ್ಮಲ್ಲೂ ಕೂಡ ಆ ಭಯ ಇತ್ತು. ಯಾವಾಗ, ಏನು ಬೇಕಾದರೂ ಆಗಬಹುದು ಎಂಬುದು. ನಾನು ಅಲ್ಲಿ ಹೋಗಿ ಅವರನ್ನ ಮಾತಾಡಿಸಿದ ನಂತರ ನಿಟ್ಟುಸಿರು ಬಿಟ್ಟರು. ಎಲ್ಲರನ್ನು ನೇರವಾಗಿ ಭೇಟಿ ಮಾಡಿದೆ. ಯಾವ ಬಟ್ಟೆಯಲ್ಲಿ ಹೋದೆನೋ ಅದೆ ಬಟ್ಟೆಯಲ್ಲಿ ಬಂದಿದ್ದೇನೆ. ನಮ್ಮ ಪೊಲೀಸ್ ಆಫೀಸರ್ ಕೂಡ ನಮ್ಮ ಜೊತೆಗೆ ಕೆಲಸ ಮಾಡಿದ್ದಾರೆ.
ಯಾರೂ ಸಿಕ್ಕಿ ಹಾಕಿಕೊಂಡಿಲ್ಲ. ಶ್ರೀನಗರದಲ್ಲಿರುವಂತ ಭಾಗದಲ್ಲಿ ಯಾವ ಕನ್ನಡಿಗರು ಸೇಫ್ ಆಗಿದ್ದಾರೆ. ಸದ್ಯಕ್ಕೆ ಆ ಭಾಗಕ್ಕೆ ಯಾರೂ ಪ್ರವಾಸಕ್ಕೆ ಹೋಗಬೇಡಿ. ಇದು ನಾನೇನು ದೊಡ್ಡ ಸಾಧನೆ ಮಾಡಿರುವಂತದ್ದಲ್ಲ. ಈ ದೇಶಕ್ಕೆ ಇಂದು ಏನು ಆಗಿದೆ ಅದನ್ನ ಪಕ್ಷ ಬೇಧ ಮರೆತು ಯೋಚನೆ ಮಾಡಬೇಕು. ಇನ್ನು ಮುಂದೆ ಈ ರೀತಿಯಾದ ಘಟನೆಗಳು ನಡೆಯಬಾರದು. ಈ ದಾಳಿಗಳು ನಮ್ಮ ಸರ್ಕಾರದಲ್ಲಿ ಆಗಿಲ್ಲ ಹೇಳಿ. ಈ ದೇಶದಲ್ಲಿ ಎಲ್ಲಾ ಕಡೆ ಆಗಿದೆ. ಈ ಥರ ಘಟನೆಗಳು ನಡೆದಾಗ ಜೋರು ಸದ್ದು ಮಾಡ್ತೀವಕ, ಆಮೇಲೆ ಸುಮ್ಮನೆ ಕೂರ್ತೀವಿ. ಇದೇ ಪದೇ ಪದೇ ಆಗ್ತಾ ಇದೆ.
ಯಾವುದೇ ಸರ್ಕಾರವಾದರೂ ಸರಿ ಜದರ ಬಗ್ಗೆ ಯೋಚನೆ ಮಾಡಬೇಕಾಗಿದೆ. ಮುಗ್ಧ ಜನಗಳು ಇದರಿಂದ ಬಲಿಯಾಗ್ತಾ ಇದಾರೆ. ಈ ಭಾಗದಲ್ಲಿ ಟೂರಿಸ್ಟ್ ಗೆ ಈ ರೀತಿ ಯಾವತ್ತು ಆಗಿರಲಿಲ್ಲ. ನಾನು ಯಾವುದೇ ಸಮುದಾಯದ ಬಗ್ಗೆ ಮಾತಾಡ್ತಾ ಇಲ್ಲ. ಆದರೆ ಅಲ್ಲಿ ಅದ್ಭುತವಾದ ವ್ಯವಸ್ಥೆ ಇದೆ ಎಂದಿದ್ದಾರೆ.





