ನವದೆಹಲಿ: ಕೊರೊನಾದಿಂದಾಗುವ ಅನಾಹುತ ತಪ್ಪಿಸಲು ಲಸಿಕೆ ರಾಮಬಾಣವಿದ್ದಂತೆ ಎಂದು ಎಲ್ಲರಿಗೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೇಂದ್ರ ಸರ್ಕಾರ ಮನವಿ ಮಾಡುತ್ತಿದೆ. ಜಾಗೃತಿ ಮೂಡಿಸುತ್ತಿದೆ. ಅಷ್ಟೇ ಅಲ್ಲ ಹಳ್ಳು ಹಳ್ಳಿಗಳಿಗೆ ಹೋಗಿ ಬಲವಂತವಾಗಿ ಲಸಿಕೆ ಹಾಕುತ್ತಿರುವುದು ಕಂಡು ಬರುತ್ತಿದೆ.
ಈ ಸಂಬಂಧ ಇವಾರ ಫೌಂಡೇಶನ್ ಎಂಬ ಎನ್ ಜಿ ಓ ಕೋರ್ಟ್ ಗೆ ಅರ್ಜಿಯನ್ನ ಸಲ್ಲಿಕೆ ಮಾಡಿತ್ತು. ಈ ಸಂಬಂಧ ಕೋರ್ಟ್ ಗೆ ಸುಪ್ರೀಂ ಕೇಂದ್ರ ಸರ್ಕಾರ ಉತ್ತರ ನೀಡಿದೆ. ದೇಶದಲ್ಲಿ ಕೊರೊನಾ ಲಸಿಕೆಯನ್ನ ಯಾರಿಗೂ ಒತ್ತಾಯದಿಂದ ಹಾಕುತ್ತಿಲ್ಲ ಎಂದು ತಿಳಿಸಿದೆ.
ಲಸಿಕೆ ನೀಡುವುದು ಅಥವಾ ಲಸಿಕೆ ಪಡೆದ ಪ್ರಮಾಣ ಪತ್ರವನ್ನ ಕಡ್ಡಾಯವಾಗಿ ಹಾಜರುಪಡಿಸುವ ಕ್ರಮವನ್ನ ಕ್ರಮವನ್ನ ಎಲ್ಲಿಯೂ ಜಾರಿಗೊಳಿಸಿಲ್ಲ. ಕೊರೊನಾ ಸೋಂಕು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಭಿಯಾನ ಕೈಗೊಂಡಿದೆ. ಎಲ್ಲರು ಲಸಿಕೆ ಹಾಕಿಸಿಕೊಂಡು ಕೊರೊನಾ ವಿರುದ್ಧ ಹೋರಾಡುವಂತೆ ಸೂಚಿಸಲಾಗಿದೆ. ಆದರೆ ಯಾರಿಗೂ ಕೂಡ ಅವರ ಇಚ್ಛೆಗೆ ವಿರುದ್ಧವಾಗಿ ಲಸಿಕೆ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.