ಬೆಂಗಳೂರು: ಸಿದ್ದರಾಮಯ್ಯ ನಾಲ್ಕು ದಶಕದಿಂದ ರಾಜಕೀಯದಲ್ಲಿ ಇದ್ದಾರೆ. ರೈತ ಕುಟುಂಬದಲ್ಲಿ ಹುಟ್ಟಿ ಬಹಳ ಕಷ್ಟಪಟ್ಟಿದ್ದಾರೆ. ತಂದೆ ತಾಯಿಗಳ ಆಶೀರ್ವಾದದಿಂದ ವಕೀಲರಾದ್ರು. ಜೀವನದ ಕಷ್ಟನೋಡಿದ್ರು, ಸಾಮಾಜಿಕ ನ್ಯಾಯದ ಪರವಾಗಿದ್ರು. ಹಲವಾರು ಹೋರಾಟದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು ಎಂದು ಮಾಜಿ ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
ನಂಜುಂಡಸ್ವಾಮಿ ಜೊತೆ ಗುರುತಿಸಿಕೊಂಡಿದ್ರು. ಹಲವು ಸೋಲು ಕಂಡ್ರು ಹೋರಾಟ ಕೈ ಬಿಡಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಏಳುಬೀಳು ಕಂಡಿದ್ದಾರೆ. ಈಗ ಸಿದ್ದರಾಮಯ್ಯಗೆ ೭೫ ವರ್ಷ ತುಂಬಿದೆ. ರಾಜಕೀಯವಾಗಿ ಪ್ರಾಮಾಣಿಕವಾಗಿ ಉಳಿಯುವುದು ಕಷ್ಟ. ಆದ್ರೆ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಉಳಿದಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿ ಇದ್ದಾರೆ.
೧೯೮೩ ರಲ್ಲಿ ಮೊದಲ ಬಾರಿಗೆ ಶಾಸಕರಾದ್ರು. ಜೆ ಹೆಚ್ ಪಟೇಲ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ರು. ೨೦೧೩ ಎಲ್ಲರ ಶ್ರಮದಿಂದ ಕಾಂಗ್ರೆಸ್ ಗೆ ಬಹುಮತ ಬಂತು. ಆಗ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾದರು. ಅವರು ತಂದ ಕಾರ್ಯಕ್ರಮಗಳು ಯಾರು ಯೋಚನೆ ಮಾಡಲು ಸಾಧ್ಯವಿಲ್ಲ.ಅದಕ್ಕೆ ಕಾರಣ ಸಿದ್ದರಾಮಯ್ಯ ಕಂಡ ಬಡತನ. ಅನ್ನಭಾಗ್ಯ, ವಿಧ್ಯಾಸಿರಿ, ಸೇರಿದಂತೆ ಅನೇಕ ಕಾರ್ಯಕ್ರಮ ನೀಡಿದ್ದಾರೆ. ನಾನು ಕೂಡ ೧೯೮೩ ರಿಂದ ಸ್ನೇಹಿತರು.ಬಯಾವುದೇ ಮುಚ್ಚುಮರೆ ಇಲ್ಲದೆ ಸಿದ್ದರಾಮಯ್ಯ ಮಾತನಾಡ್ತಾರೆ.
ಸಿದ್ದರಾಮಯ್ಯ ಆಡಳಿತವನ್ನು ಈ ನಾಡಿನ ಜನತೆ ಮೆಚ್ಚಿಕೊಂಡಿದ್ದಾರೆ. ೧೪೫ ಪ್ರಣಾಳಿಕೆ ಭರವಸೆಗಳನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ. ಈ ಕಾರ್ಯಕ್ರಮ ಸಿದ್ದರಾಮಯ್ಯ ಹಿತೈಷಿಗಳ ಯೋಚನೆ. ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮ ನಡೆಯುತ್ತೆ. ಈ ಸಮಾವೇಶದ ಉದ್ಘಾಟನೆಯನ್ನು ರಾಹುಲ್ ಗಾಂಧಿ ಮಾಡ್ತಾರೆ. ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬರ್ತಾರೆ. ವೇಣುಗೋಪಾಲ, ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದಲ್ಲಿ ಇರ್ತಾರೆ ಎಂದಿದ್ದಾರೆ.
ಸಿದ್ದರಾಮಯ್ಯ ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಜನಪ್ರಿಯ ನಾಯಕ. ಪ್ರಣಾಳಿಕೆಯಲ್ಲಿ ನೂರಾ ಅರವತ್ತಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಸಮಾವೇಶವನ್ನು ರಾಹುಲ್ ಗಾಂಧಿ ಉದ್ಘಾಟನೆ ಮಾಡಲಿದ್ದಾರೆ. ಸುರ್ಜೆವಾಲ, ಕೆ ಸಿ ವೇಣುಗೋಪಾಲ್ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಕಾಂಗ್ರೆಸ್ ನ ಅನೇಕ ಹಿರಿಯರು ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಐದರಿಂದ ಆರು ಲಕ್ಷ ಜನಸಮೂಹ ಸೇರಲಿದ್ದಾರೆ. ಎಲ್ಲರ ಸಹಕಾರದಿಂದ ಇದು ಎಲ್ಲರ ಕಾರ್ಯಕ್ರಮ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.