ಕಾಡುಗೊಲ್ಲರ ಮೀಸಲಾತಿಗೆ ವಿರೋಧವಿಲ್ಲ : ಯಾದವ ಶ್ರೀ

1 Min Read

 

ಚಿತ್ರದುರ್ಗ : ಕೆಲ ಮಾಧ್ಯಮಗಳಲ್ಲಿ ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ  ಪ್ರಕಟಿಸಲಾಗಿದೆ. “ಕಾಡುಗೊಲ್ಲರ ಒಳಮೀಸಲಾತಿಗೆ ಬೆಂಬಲ ಇಲ್ಲ” ಈ ರೀತಿಯ ಹೇಳಿಕೆಯನ್ನು ನಾವು ನೀಡಿಲ್ಲವೆಂದು ಸ್ಪಷ್ಟಪಡಿಸುತ್ತೇವೆ. ಹಾಗೂ ಕಾಡುಗೊಲ್ಲರ ಮೀಸಲಾತಿಗೆ ನಮ್ಮ ವಿರೋಧ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತವೆ.

ಯಾದವ ಸಮುದಾಯದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗಾಗಿ ನಮ್ಮ ಪ್ರಯತ್ನವಿದೆ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಅಭಿವೃದ್ಧಿಯಾಗಲು ಶ್ರೀಮಠ ಕಂಕಣ ತೊಟ್ಟು ಶ್ರಮಿಸುತ್ತಿದೆ.  ಸಂವಿಧಾನದ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಸೂತ್ರದಲ್ಲಿ ಇತರೆ ಸಮುದಾಯದೊಂದಿಗೆ ಸರಿಸಮನಾಗಿ ಗೊಲ್ಲ ಸಮುದಾಯ ಸಮಸಮಾಜ ನಿರ್ಮಾಣಕ್ಕೆ ಸದೃಢವಾಗಲು ಶ್ರೀಮಠ ಅಶಿಸುತ್ತದೆ. ಸಮುದಾಯದ ಅಂತರಿಕ ವಿಚಾರವನ್ನು ಸಮಾಜದ ತಜ್ಞರು ಚರ್ಚಿಸಿ ಅಭಿವೃದ್ಧಿ ಪೂರ್ವಕವಾಗಿ ಸರ್ಕಾರದೊಂದಿಗೆ ವ್ಯವಹಾರಿಸುತ್ತಾರೆ.

ಒಗ್ಗಟಿನಲ್ಲಿ ಬಲವಿದೆ ಎಂಬ ನಾಡ್ನುಡಿಯಂತೆ ಎಲ್ಲಾ ಒಳಪಂಗಡಗಳು ಒಂದಾಗಿ ಸಾಗಬೇಕು. ಗೊಲ್ಲಸಮೂದಯದ ಬಲವಂತರು ಅಬಲ ಅಶಕ್ತರನ್ನು ಕೈಯಿಡಿದು ಶಕ್ತಿ ತುಂಬುವ ಕಾರ್ಯಮಾಡಬೇಕು. ಶ್ರೀಮಠ ಸಮಸ್ತ ಗೊಲ್ಲ ಸಮುದಾಯದ ಕ್ಷೇಮ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *