ಬೀದರ್: ಮುಂಗಾರು ಶುರುವಾಯ್ತು ಅಂದ್ರೆ ಬಿತ್ತನೆ ಆರಂಭವಾಗುತ್ತದೆ. ಆದರೆ ಇದರ ನಡುವೆ ರೈತರಿಗೆ ಒಂದಷ್ಟು ಸಮಸ್ಯೆಗಳು ಕಾಡುವುದಕ್ಕೆ ಶುರುವಾಗುತ್ತೆ. ಬಿತ್ತನೆ ಬೀಜದ ಕೊರತೆ, ರಸಗೊಬ್ಬರದ ಕೊರತೆ ಆಯಾ ಜಿಲ್ಲೆಯಲ್ಲಿ ಕಾಡಲು ಶುರುವಾಗುತ್ತದೆ. ಇದೀಗ ಆ ಕೊರತೆಯ ತಲೆ ಬಿಸಿಯನ್ನು ತಂಪು ಮಾಡಿದ್ದಾರೆ ಸಚಿವ ಭಗವಂತ್ ಖೂಬಾ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸುದ ಸಚುವ ಖೂಬಾ ಅವರು, ಮುಂಗಾರಿನಲ್ಲಿ ಪೂರ್ಣ ಬಿತ್ತನೆ ಆಗುವ ತನಕ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಕೃಷಿ ಮತ್ತು ಕಂದಾಯ ಅಧಿಕಾರಿಗಳು ರಸಗೊಬ್ಬರ ಮಾರಾಟದ ಕೇಂದ್ರಗಳಿಗೆ ತೆರಳಿ ಮಾಹಿತಿ ಪಡೆಯಬೇಕಾಗುತ್ತದೆ. ಜಿಲ್ಲೆ ಒಳಗೊಂಡಂತೆ ರಾಜ್ಯಕ್ಕೆ ಎಷ್ಟು ರಸಗೊಬ್ಬರ ಬೇಕು ಎಂಬುದನ್ನು ಕಳುಹಿಸುವ ಜವಬ್ದಾರಿ ನಮ್ಮ ಮೇಲಿದೆ. ಈಗ ಇರುವುದಕ್ಕಿಂತ ಹೆಚ್ಚಿನ ರಸಗೊಬ್ಬರದ ಬೇಡಿಕೆ ಬಂದರೆ ಮೂರು ದಿನದ ಒಳಗಾಗಿ ರಸಗೊಬ್ಬರ ಕಳುಹಿಸಿಕೊಡಲಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ. ಒಂದು ವೇಳೆ ಕೊರತೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.