ಬೆಂಗಳೂರು: ಇಂದು ಹೈಕೋರ್ಟ್ ಹುಜಾಬ್ ಗೆ ಸಂಬಂಧಿಸಿದಂತ ತೀರ್ಪು ನೀಡಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿದೆ. ಈ ಸಂಬಂಧ ಮುಸ್ಲಿಂ ಮುಖಂಡರು ಸುಪ್ರೀಂ ಕೋರ್ಟ್ ಗೆ ಹೋಗುವ ತೀರ್ಮಾನ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಶಾಸಕ ರಘುಪತಿ ಭಟ್, ಸುಪ್ರೀಂ ಕೋರ್ಟ್ ಗೆ ಹೋಗಿ ಇದನ್ನ ದೇಶಾದ್ಯಂತ ಹರಡುವುದು ಬೇಡ ಎಂದಿದ್ದಾರೆ. ನನಗೆ ಖಂಡಿತ ಭರವಸೆ ಇದೆ. ಸರ್ಕಾರವೂ ಇದರ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುತ್ತೆ. ಮುಸ್ಲಿಂ ಬಾಂಧವರು ಕೂಡ ಇದನ್ನ ಪಾಲಿಸುತ್ತಾರೆಂಬ ವಿಶ್ವಾಸವಿದೆ. ಎಲ್ಲೆಲ್ಲಿ ಯೂನಿಫಾರ್ಮ್ ಕಡ್ಡಾಯವಿದೆ ಅಲ್ಲಿ ಪಾಲಿಸುತ್ತಾರೆ.
ಇದು ಪ್ರಜಾಪ್ರಭುತ್ವ ರಾಷ್ಟ್ರ ಹೀಗಾಗಿ ಎಲ್ಲರೂ ಇದನ್ನ ಪಾಲನೆ ಮಾಡ್ತಾರೆ. ಸುಪ್ರೀಂ ಕೋರ್ಟ್ ಗೆ ಹೋಗುವ ಅವಕಾಶ ಇದೆ. ಹೋಗಲಿ. ಆದರೆ ಸುಪ್ರೀಂ ಕೋರ್ಟ ಗೆ ಹೋಗಿ. ದೇಶದಾದ್ಯಂತ ಹರಡುವ ಅವಶ್ಯಕತೆ ಇಲ್ಲ. ಎಲ್ಲಾ ಅರ್ಜಿಗಳಿಗೂ ಅವಕಾಶ ಕೊಟ್ಟು, ವಿಚಾರಣೆ ನಡೆಸಿ ಈ ತೀರ್ಪು ನೀಡಿರೋದು. ನಾನು ಈ ಸಂಬಂಧ ಕೇವಿಯಟ್ ಹಾಕುತ್ತೇನೆ. ನಮ್ಮ ವಕೀಲರ ಬಳಿ ಮಾತಾಡಿಕೊಂಡು ಬಳಿಕ ವೈಯಕ್ತಿಕವಾಗಿ ಹಾಕುತ್ತೇನೆ ಎಂದಿದ್ದಾರೆ.