ಇನ್ಮುಂದೆ ಬಿಬಿಎಂಪಿ ಇಲ್ಲ.. ಒನ್ಲಿ ಗ್ರೇಟರ್ ಬೆಂಗಳೂರು; ಸಿಲಿಕಾನ್ ಸಿಟಿ ಮಂದಿಗೆ ಏನೆಲ್ಲಾ ಬದಲಾವಣೆಯಾಗಲಿದೆ..!

suddionenews
1 Min Read

ಬೆಂಗಳೂರು; ಸಿಲಿಕಾನ್ ಸಿಟಿಯ ಎಲ್ಲಾ ಆಗು ಹೋಗುಗಳನ್ನ ನಿಭಾಯಿಸ್ತಾ ಇರೋದು ಬಿಬಿಎಂಪಿ. ಇದೀಗ ಬಿಬಿಎಂಪಿ ಎಂಬ ಹೆಸರನ್ನೇ ಬದಲಾಯಿಸಲಾಗಿದೆ. ಬಹಳ ವರ್ಷಗಳಿಂದ ಇದ್ದ ಹೆಸರು ಇಂದಿನಿಂದ ಬದಲಾಗಿದೆ. ಬಿಬಿಎಂಪಿ ಎಂಬ ಹೆಸರು ಇಂದಿನಿಂದ ಗ್ರೇಟರ್ ಬೆಂಗಳೂರು ಆಗಿ ಬದಲಾಗಿದೆ. ಈ ಮೂಲಕ ಹಲವು ಬದಲಾವಣೆಗೆ ಸಿಲಿಕಾನ್ ಸಿಟಿ ನಾಂದಿ‌ ಆಡಲಿದೆ.

ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ಮೂರು ಅಥವಾ ಐದು ಪಾಲಿಕೆಗಳನ್ನ ಸೃಷ್ಟಿಸುವ ಬಗ್ಗೆ ಚರ್ಚೆಯಾಗಿದೆ. ಸದ್ಯಕ್ಕೆ ಇಡೀ ಬೆಂಗಳೂರಿಗೆ ಒಂದೇ ಬಿಬಿಎಂಪಿ ಆಗಿತ್ತು. ಈಗ ಮೂರು ಪಾಲಿಕೆಗಳನ್ನ ಸೃಷ್ಟಿಸುವ ಪ್ಲ್ಯಾನ್ ನಡೆಸಲಾಗಿದೆ. ಏನು 17 ವರ್ಷದಿಂದ ಬಿಬಿಎಂಪಿ ಎಂಬ ಹೆಸರಿನಲ್ಲಿಯೇ ಸಾಗಿದ ಪಾಲಿಕೆ ಗ್ರೇಟರ್ ಬೆಂಗಳೂರು ಆದ್ಮೇಲೆ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬುದು ಸಿಲಿಕಾನ್ ಸಿಟಿ ನಾಗರಿಕರ ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಸರ್ಕಾರದಿಂದಾಗಲೀ, ಬಿಬಿಎಂಪಿಯಿಂದಾಗಲೀ ಉತ್ತರ ಸಿಕ್ಕಿಲ್ಲ.

ಮುಂದಿನ ಮೂರು ತಿಂಗಳು ಬಿಬಿಎಂಪಿಯೇ ಕಾರ್ಯ ನಿರ್ವಹಿಸಲಿದೆ. ಆ ಬಳಿಕ ಬಿಬಿಎಂಪಿ ವಿಭಜನೆಯೂ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳು ಆಗಲಿದ್ದಾವೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಸಹ ಬಿಬಿಎಂಪಿ ವ್ಯಾಪ್ತಿಗೆ ಸೇರಲಿವೆ. ಮುಂದಿನ ದಿನಗಳಲ್ಲಿ ಆಸ್ತಿಯ ನೀತಿಯೂ ಬದಲಾವಣೆಯಾಗುವ ಸಾಧ್ಯತೆ ಇದೆ. ಆದರೆ ಈಗ ಯಾವುದೇ ಬದಲಾವಣೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬದಲಾವಣೆಗಳು ಆಗಲಿವೆ. ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ಗ್ರೇಟರ್ ಬೆಂಗಳೂರು ನಿರ್ಧಾರಕ್ಕೆ ರಾಜಕೀಯ ಪಕ್ಷಗಳಿಂದ ಸಹಜವಾಗಿಯೇ ಪರ ವಿರೋಧಗಳು ಕೇಳಿ ಬರುತ್ತಿವೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನ ತೆಗೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks